A kneeling petitioner gives thanks while elders help his family and foreign kings enter the courtyard

ಕೀರ್ತನೆಗಳು 138

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 138 ಉತ್ತರಿಸಲ್ಪಟ್ಟ ಪ್ರಾರ್ಥನೆಗೆ ಪೂರ್ಣಹೃದಯದ ಕೃತಜ್ಞತೆ ಮತ್ತು ಬಲಗೊಂಡ ಧೈರ್ಯದಿಂದ ಪ್ರತಿಕ್ರಿಯಿಸುತ್ತದೆ. ಅರಸರು ದೈವಿಕ ಮಾರ್ಗಗಳ ಬಗ್ಗೆ ಕೇಳುತ್ತಾರೆ, ಆದರೆ ವಿಶೇಷ ಗಮನವು ದೀನರ ಮೇಲೆ ನೆಲೆಸಿದೆ; ಅಪಾಯವು ಸ್ಥಿರ ಉದ್ದೇಶವನ್ನಾಗಲಿ ಪೂರ್ಣಗೊಳಿಸುವ ನಂಬಿಗಸ್ತಿಕೆಯನ್ನಾಗಲಿ ರದ್ದುಗೊಳಿಸಲಾರದು.
ಕೃತಜ್ಞತೆದೀನತೆಧೈರ್ಯಉದ್ದೇಶ
1ಯೆಹೋವ ದೇವರೇ, ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಕೊಂಡಾಡುವೆನು; ದೇವರುಗಳ ಮುಂದೆ ನಿಮ್ಮನ್ನು ಸ್ತುತಿಸುವೆನು.
2ನಿಮ್ಮ ಪರಿಶುದ್ಧ ಮಂದಿರದ ಕಡೆಗೆ ಅಡ್ಡಬಿದ್ದು, ನಿಮ್ಮ ಒಡಂಬಡಿಕೆಯ ಪ್ರೀತಿ, ನಿಮ್ಮ ಸತ್ಯತೆಯ ನಿಮಿತ್ತ ನಿಮ್ಮ ಹೆಸರನ್ನು ಕೊಂಡಾಡುವೆನು; ನೀವು ನಿಮ್ಮ ವಾಕ್ಯವನ್ನು ನಿಮ್ಮ ಹೆಸರಿಗಿಂತಲೂ ಮಿಗಿಲಾಗಿ ಘನಪಡಿಸಿದ್ದೀರಿ.
3ನಾನು ಕರೆದಾಗ ನೀವು ನನಗೆ ಉತ್ತರಕೊಟ್ಟಿರುವಿರಿ. ನನ್ನ ಪ್ರಾಣಕ್ಕೆ ಬಲವನ್ನು ಕೊಟ್ಟು, ನನ್ನನ್ನು ಬಲಪಡಿಸಿದ್ದೀರಿ.
4ಯೆಹೋವ ದೇವರೇ, ನಿಮ್ಮ ತೀರ್ಪುಗಳನ್ನು ಭೂಮಿಯ ಅರಸರೆಲ್ಲರೂ ಕೇಳುವಾಗ, ನಿಮ್ಮನ್ನು ಕೊಂಡಾಡಲಿ.
5ಹೌದು, ಅವರು ಯೆಹೋವ ದೇವರ ಮಾರ್ಗಗಳ ಯೆಹೋವ ದೇವರ ಮಹಿಮೆಯು ಮಹೋನ್ನತವಾಗಿದೆ.
6ಯೆಹೋವ ದೇವರು ಉನ್ನತರಾಗಿದ್ದರೂ, ದೀನನನ್ನು ಗಮನಿಸುತ್ತಾರೆ; ಆದರೆ ಗರ್ವಿಷ್ಠನನ್ನು ದೂರದಿಂದ ತಿಳಿದುಕೊಳ್ಳುತ್ತಾರೆ.
7ನಾನು ಕಷ್ಟದ ಮಧ್ಯದಲ್ಲಿ ನಡೆದಾಗ್ಯೂ, ನೀವು ನನ್ನನ್ನು ಬದುಕಿಸಿ, ನನ್ನ ಶತ್ರುಗಳ ಕೋಪಕ್ಕೆ ವಿರೋಧವಾಗಿ ನಿಮ್ಮ ಕೈಯನ್ನು ಚಾಚಿದ್ದೀರಿ; ನಿಮ್ಮ ಬಲಗೈಯಿಂದ ನನ್ನನ್ನು ರಕ್ಷಿಸಿದ್ದೀರಿ.
8ಯೆಹೋವ ದೇವರು ನನ್ನ ನ್ಯಾಯವನ್ನು ಸಿದ್ಧಿಗೆ ತರುತ್ತಾರೆ; ಯೆಹೋವ ದೇವರೇ, ನಿಮ್ಮ ಪ್ರೀತಿಯು ಎಂದೆಂದಿಗೂ ಇರುವುದು; ನಿಮ್ಮ ಕೈಕೆಲಸಗಳನ್ನು ನೆರವೇರಿಸಿರಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.