
ಕೀರ್ತನೆಗಳು 137
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 137 ಬಾಬೆಲಿನ ನದಿಗಳ ಬಳಿ ದೇಶಭ್ರಷ್ಟರ ದುಃಖ, ಸಾಂಸ್ಕೃತಿಕ ಒತ್ತಡ, ತೀವ್ರ ನೆನಪು ಮತ್ತು ಪರಿಹಾರವಾಗದ ಕೋಪವನ್ನು ಕಾಪಾಡುತ್ತದೆ. ಮೌನಗೊಳಿಸಿದ ಕಿನ್ನರಿಗಳು ಯೆರೂಸಲೇಮ್ ಕಳೆದುಹೋಗಿಯೂ ಮರೆಯದೆಯೂ ಇರುವಾಗ ಪವಿತ್ರ ಹಾಡನ್ನು ಮನರಂಜನೆಯಾಗಿ ಪರಿವರ್ತಿಸಲು ನಿರಾಕರಿಸುವುದನ್ನು ಸಾಕಾರಗೊಳಿಸುತ್ತವೆ.
ದೇಶಭ್ರಷ್ಟತೆಚೀಯೋನ್ದುಃಖನೆನಪು
1ಬಾಬಿಲೋನಿನ ನದಿಗಳ ಹತ್ತಿರ ನಾವು ಕುಳಿತುಕೊಂಡು, ಚೀಯೋನನ್ನು ಜ್ಞಾಪಕ ಮಾಡಿಕೊಂಡಾಗ ಅತ್ತೆವು.
2ಅದರ ನಡುವೆ ಇರುವ ನೀರವಂಜಿ ಮರಗಳ ಮೇಲೆ ನಮ್ಮ ಕಿನ್ನರಿಗಳನ್ನು ತೂಗು ಹಾಕಿದೆವು.
3ಏಕೆಂದರೆ ಅಲ್ಲಿ ನಮ್ಮನ್ನು ಸೆರೆಹಿಡಿದು ಬಂಧಿಸಿದವರು, ನಮಗೆ ಹಾಡನ್ನು ಹಾಡಲು ಹೇಳಿದ್ದರು; ನಮ್ಮನ್ನು ಪೀಡಿಸುವವರು ವಿನೋದಕ್ಕಾಗಿ ಹಾಡನ್ನು ಕೇಳಲು ಬಯಸಿದ್ದರು; “ಚೀಯೋನಿನ ಹಾಡುಗಳಲ್ಲಿ ಒಂದು ನಮಗೆ ಹಾಡಿರಿ,” ಎಂದರು.
4ಅನ್ಯದೇಶದಲ್ಲಿ ನಾವು ಯೆಹೋವ ದೇವರ ಹಾಡುಗಳನ್ನು ಹಾಡುವುದು ಹೇಗೆ?
5ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಟ್ಟರೆ, ನನ್ನ ಬಲಗೈಯ ಕೌಶಲ್ಯ ಮರೆತು ಹೋಗಲಿ.
6ನಾನು ನಿನ್ನನ್ನು ಜ್ಞಾಪಕಮಾಡಿಕೊಳ್ಳದಿದ್ದರೆ, ಯೆರೂಸಲೇಮನ್ನು ನನ್ನ ಎಲ್ಲಾ ಸಂತೋಷಕ್ಕಿಂತಲೂ ಹೆಚ್ಚಾಗಿಡದಿದ್ದರೆ, ನನ್ನ ನಾಲಿಗೆಯು ಸೇದಿಹೋಗಲಿ.
7ಯೆರೂಸಲೇಮು ಬಿದ್ದುಹೋದ ದಿವಸದಲ್ಲಿ, “ಹಾಳುಮಾಡಿರಿ, ಅದರ ಅಸ್ತಿವಾರದವರೆಗೆ ಹಾಳುಮಾಡಿರಿ,” ಎಂದು ಹೇಳಿದ ಎದೋಮಿನವರನ್ನು ಯೆಹೋವ ದೇವರೇ ಜ್ಞಾಪಕಮಾಡಿಕೊಳ್ಳಿರಿ.
8ಹಾಳಾಗಲಿಕ್ಕಿರುವ ಬಾಬಿಲೋನ್ ನಗರವೇ, ನೀನು ನಮಗೆ ಮಾಡಿದ್ದಕ್ಕೆ ಪ್ರತೀಕಾರವನ್ನು ನಿನಗೆ ಸಲ್ಲಿಸುವವನು ಧನ್ಯನು.
9ನಿಮ್ಮ ಚಿಕ್ಕ ಕೂಸುಗಳನ್ನು ಹಿಡಿದು, ಬಂಡೆಗಳ ಮೇಲೆ ಅಪ್ಪಳಿಸಿ ಬಿಡುವವನು ಧನ್ಯನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.