
ಕೀರ್ತನೆಗಳು 134
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 134 ರಾತ್ರಿಯ ಆಶೀರ್ವಾದದ ವಿನಿಮಯದೊಂದಿಗೆ ಯಾತ್ರೆಯ ಸಂಗ್ರಹವನ್ನು ಮುಕ್ತಾಯಗೊಳಿಸುತ್ತದೆ. ಇತರರು ವಿಶ್ರಮಿಸುವಾಗ ಅಥವಾ ಹೊರಡುವಾಗ ಪವಿತ್ರಸ್ಥಳದ ಸೇವಕರು ಸ್ತುತಿಯನ್ನು ಮುಂದುವರಿಸುತ್ತಾರೆ, ಮತ್ತು ಆರಾಧಕರು ಆಕಾಶ ಮತ್ತು ಭೂಮಿಯ ಸೃಷ್ಟಿಕರ್ತನಿಂದ ಆಶೀರ್ವಾದವನ್ನು ಪಡೆಯುತ್ತಾರೆ.
ರಾತ್ರಿಯ ಆರಾಧನೆಆಶೀರ್ವಾದಪವಿತ್ರಸ್ಥಳಯಾತ್ರೆ
1ಯೆಹೋವ ದೇವರ ಆಲಯದಲ್ಲಿ ಪ್ರತಿ ರಾತ್ರಿ ಸೇವೆ ಸಲ್ಲಿಸುವ ಯೆಹೋವ ದೇವರ ಎಲ್ಲಾ ಸೇವಕರೇ, ಯೆಹೋವ ದೇವರನ್ನು ಸ್ತುತಿಸಿರಿ.
2ನಿಮ್ಮ ಕೈಗಳನ್ನು ಪರಿಶುದ್ಧ ಸ್ಥಳದಲ್ಲಿ ಎತ್ತಿ, ಯೆಹೋವ ದೇವರನ್ನು ಸ್ತುತಿಸಿರಿ.
3ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿದ ಯೆಹೋವ ದೇವರು, ಚೀಯೋನಿನೊಳಗಿಂದ ನಿಮ್ಮನ್ನು ಆಶೀರ್ವದಿಸಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.