Families embrace at a feast as oil is poured upon a priest before Mount Hermon

ಕೀರ್ತನೆಗಳು 133

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 133 ಸಮುದಾಯದ ಐಕ್ಯತೆಯನ್ನು ಅಮೂಲ್ಯವೂ ಸಮೃದ್ಧವೂ ಜೀವದಾಯಕವೂ ಎಂದು ಕೊಂಡಾಡುತ್ತದೆ. ಸುಗಂಧ ಅಭಿಷೇಕ ತೈಲ ಮತ್ತು ಚೈತನ್ಯದ ಪರ್ವತದ ಇಬ್ಬನಿಯು ವ್ಯಕ್ತಿಗಳನ್ನು ಮೀರಿ ಹರಿಯುವ ಆಶೀರ್ವಾದವನ್ನು ಚಿತ್ರಿಸಿ, ವೈವಿಧ್ಯಮಯ ಒಡಂಬಡಿಕೆಯ ಕುಟುಂಬವನ್ನು ಹಂಚಿಕೊಂಡ ಜೀವನದಲ್ಲಿ ಒಟ್ಟುಗೂಡಿಸುತ್ತವೆ.
ಐಕ್ಯತೆಅಭಿಷೇಕಆಶೀರ್ವಾದಸಮುದಾಯ
1ಸಹೋದರರು ಒಂದಾಗಿ ಬಾಳುವುದು ಎಷ್ಟೋ ಒಳ್ಳೆಯದು! ಎಷ್ಟೋ ರಮ್ಯವಾದದ್ದು!
2ಆ ಒಂದಾಗಿರುವಿಕೆಯು ತಲೆಯ ಮೇಲಿಂದ ಗಡ್ಡದ ಮೇಲೆ ಅಂದರೆ, ಆರೋನನ ಗಡ್ಡದ ಮೇಲೆ ಇಳಿದು, ಅವನ ವಸ್ತ್ರದ ಕೊರಳಪಟ್ಟಿಯವರೆಗೆ ಮೇಲೆ ಇಳಿಯುವ ಅಮೂಲ್ಯ ತೈಲದ ಹಾಗೆ ಇರುತ್ತದೆ.
3ಆ ಒಂದಾಗಿರುವಿಕೆಯು ಹೆರ್ಮೋನ್ ಪರ್ವತದಿಂದ ಪ್ರಾರಂಭವಾಗಿ ಚೀಯೋನ್ ಪರ್ವತಗಳ ಮೇಲೆ ಬೀಳುವ ಮಂಜಿನ ಹಾಗೆಯೂ ಇದೆ. ಏಕೆಂದರೆ ಎಲ್ಲಿ ಒಂದಾಗಿರುವಿಕೆಯು ಇದೆಯೋ ಅಲ್ಲಿ ಯೆಹೋವ ದೇವರು ಆಶೀರ್ವಾದವನ್ನೂ, ಯುಗಯುಗಾಂತರಕ್ಕೂ ಜೀವವನ್ನೂ ಅನುಗ್ರಹಿಸುತ್ತಾರೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.