Three generations share a courtyard meal beneath grapes and olives overlooking peaceful Jerusalem

ಕೀರ್ತನೆಗಳು 128

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 128 ಅರ್ಥಪೂರ್ಣ ದುಡಿಮೆ, ಸಮೃದ್ಧ ವಿವಾಹ, ಎಣ್ಣೆಮರದ ಚಿಗುರುಗಳಂಥ ಮಕ್ಕಳು, ದೀರ್ಘಾಯುಷ್ಯ ಮತ್ತು ಯೆರೂಸಲೇಮಿನ ಶಾಂತಿಯ ಮೂಲಕ ಆಶೀರ್ವಾದವನ್ನು ಚಿತ್ರಿಸುತ್ತದೆ. ಖಾಸಗಿ ಮನೆತನದ ಸಂತೋಷವು ಸಹಜವಾಗಿ ಇಡೀ ಒಡಂಬಡಿಕೆಯ ಸಮುದಾಯದ ಕಾಳಜಿಯಾಗಿ ವಿಸ್ತರಿಸುತ್ತದೆ.
ಕುಟುಂಬದುಡಿಮೆಆಶೀರ್ವಾದಶಾಂತಿ
1ಯೆಹೋವ ದೇವರಿಗೆ ಭಯಪಟ್ಟು ಅವರ ಮಾರ್ಗಗಳಲ್ಲಿ ನಡೆದುಕೊಳ್ಳುವ ಪ್ರತಿಯೊಬ್ಬನು ಧನ್ಯನು.
2ನಿನ್ನ ಕೈಗಳ ಕಷ್ಟಾರ್ಜಿತವನ್ನು ನೀನು ಊಟಮಾಡಿ ಆಶೀರ್ವಾದವನ್ನೂ ಅಭಿವೃದ್ಧಿಯನ್ನೂ ಹೊಂದುವಿ.
3ನಿನ್ನ ಹೆಂಡತಿಯು ನಿನ್ನ ಮನೆಯಲ್ಲಿರುವ ಫಲಭರಿತವಾದ ದ್ರಾಕ್ಷಿಬಳ್ಳಿಯ ಹಾಗೆ ಇರುವಳು. ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು, ಓಲಿವ್ ಮರಗಳ ಸಸಿಗಳ ಹಾಗೆ ಇರುವರು.
4ಯೆಹೋವ ದೇವರಿಗೆ ಭಯಪಡುವ ಮನುಷ್ಯನು ಹೀಗೆಯೇ ಆಶೀರ್ವಾದ ಹೊಂದುವನು.
5ಯೆಹೋವ ದೇವರು ನಿನ್ನನ್ನು ಚೀಯೋನಿನೊಳಗಿಂದ ನಿನ್ನ ಜೀವಮಾನವೆಲ್ಲಾ ಆಶೀರ್ವದಿಸಲಿ; ನೀನು ಯೆರೂಸಲೇಮಿನ ಸಮೃದ್ಧಿಯನ್ನು ಕಾಣುವಿ.
6ನೀನು ಮಕ್ಕಳ ಮಕ್ಕಳನ್ನು ಕಾಣುವ ಬದುಕು ನಿನಗಿರಲಿ ಇಸ್ರಾಯೇಲರ ಮೇಲೆ ಸಮಾಧಾನವಿರಲಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.