An elder shows healed scars to younger listeners beside cut ropes as former oppressors leave

ಕೀರ್ತನೆಗಳು 129

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 129 ಇಸ್ರಾಯೇಲಿನ ಯೌವನದಿಂದ ಪದೇ ಪದೇ ದಬ್ಬಾಳಿಕೆಯನ್ನು ನೆನಪಿಸಿಕೊಳ್ಳುತ್ತದೆ, ಆದರೆ ಅದಕ್ಕೆ ಕೊನೆಯ ಮಾತನ್ನು ಕೊಡುವುದಿಲ್ಲ. ಆಳವಾದ ಗಾಯಗಳು ಕಾಣುತ್ತಲೇ ಇರುತ್ತವೆ, ಆದರೆ ಬಂಧಿಸುವ ಹಗ್ಗಗಳು ಕತ್ತರಿಸಲ್ಪಡುತ್ತವೆ ಮತ್ತು ಶೋಷಕರು ಮಾಳಿಗೆಯ ಮೇಲಿನ ಆಳವಿಲ್ಲದ ಹುಲ್ಲಿನಷ್ಟು ತಾತ್ಕಾಲಿಕರಾಗುತ್ತಾರೆ.
ದಬ್ಬಾಳಿಕೆಉಳಿವುನ್ಯಾಯಸ್ವಾತಂತ್ರ್ಯ
1“ನನ್ನ ಯೌವನದಿಂದ ನನ್ನನ್ನು ಶತ್ರುಗಳು ಬಹಳ ಬಾಧಿಸಿದ್ದಾರೆ,” ಎಂದು ಇಸ್ರಾಯೇಲು ಹೇಳಲಿ.
2“ನನ್ನ ಯೌವನದಿಂದ ವೈರಿಗಳು ನನ್ನ ಮೇಲೆ ದಬ್ಬಾಳಿಕೆ ಮಾಡಿದರು; ಆದರೆ ಅವರು ನನ್ನ ಮೇಲೆ ವಿಜಯ ಸಾಧಿಸಲಿಲ್ಲ.
3ಊಳುವವರು ನನ್ನ ಬೆನ್ನಿನ ಮೇಲೆ ಉತ್ತಿದರು, ಉದ್ದವಾದ ಗಾಯಗೆರೆಗಳನ್ನು ಮಾಡಿದರು
4ಆದರೆ ಯೆಹೋವ ದೇವರು ನೀತಿವಂತರು; ದುಷ್ಟರು ಹಾಕಿದ ಬಂಧಗಳನ್ನು ದೇವರು ಕಡಿದು, ನಮ್ಮನ್ನು ಬಿಡುಗಡೆ ಮಾಡಿದ್ದಾರೆ.”
5ಚೀಯೋನನ್ನು ದ್ವೇಷಿಸುವವರೆಲ್ಲರು ನಾಚಿಕೆಪಟ್ಟು ಹಿಂದಿರುಗಲಿ.
6ಅವರು ಮಾಳಿಗೆ ಮೇಲಿನ ಹುಲ್ಲಿನಂತೆ ಆಗಲಿ. ಅವು ಬೆಳೆಯುವುದಕ್ಕೆ ಮುಂಚೆ ಒಣಗಿ ಹೋಗುತ್ತದೆ.
7ಅದರಿಂದ ಕೊಯ್ಯುವವನು ತನ್ನ ಕೈ ತುಂಬಿಸಿಕೊಳ್ಳನು, ಸಿವುಡು ಕಟ್ಟುವವನು ತನ್ನ ಉಡಿಯನ್ನೂ ತುಂಬಿಸಿಕೊಳ್ಳಲಾರನು.
8“ಯೆಹೋವ ದೇವರ ಆಶೀರ್ವಾದವು ನಿಮ್ಮ ಮೇಲೆ ಇರಲಿ; ಯೆಹೋವ ದೇವರು ಹೆಸರಿನಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇವೆ,” ಎಂದು ಹಾದುಹೋಗುವವರು ಹೇಳದಿರಲಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.