A family embraces children at a building site while workers and city watchmen pause to pray

ಕೀರ್ತನೆಗಳು 127

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 127 ಕಟ್ಟುವ, ಕಾಯುವ, ದುಡಿಯುವ ಮತ್ತು ಕುಟುಂಬ ಬೆಳೆಸುವಲ್ಲಿ ಆತಂಕದ ಸ್ವಾವಲಂಬನೆಗೆ ಸವಾಲು ಹಾಕುತ್ತದೆ. ಮಾನವ ಪ್ರಯತ್ನ ಮುಖ್ಯ, ಆದರೂ ಶಾಶ್ವತ ಭದ್ರತೆಯೂ ಪರಂಪರೆಯೂ ವಿಶ್ರಾಂತಿಯಿಲ್ಲದ ಹೋರಾಟದಿಂದ ಮಾತ್ರ ಉತ್ಪಾದಿಸಿದ ಸಾಧನೆಗಳಲ್ಲ, ಪಡೆದ ಉಡುಗೊರೆಗಳು.
ಮನೆತನಕೆಲಸಮಕ್ಕಳುಭರವಸೆ
1ಯೆಹೋವ ದೇವರು ಮನೆಯನ್ನು ಕಟ್ಟದೆ ಇದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಪ್ರಯಾಸಪಡುತ್ತಾರೆ; ಯೆಹೋವ ದೇವರು ಪಟ್ಟಣವನ್ನು ಕಾಯದೆ ಇದ್ದರೆ, ಅದನ್ನು ಕಾಯುವವರು ವ್ಯರ್ಥವಾಗಿ ಕಾಯುತ್ತಾರೆ.
2ನೀವು ಆಹಾರಕ್ಕಾಗಿ ಶ್ರಮೆಪಟ್ಟು, ಬೆಳಿಗ್ಗೆ ಬೇಗ ಏಳುವುದೂ, ರಾತ್ರಿ ತಡವಾಗಿ ಮಲಗುವುದೂ ವ್ಯರ್ಥವೇ, ದೇವರು ತಮ್ಮನ್ನು ಪ್ರೀತಿಸುವವರಿಗೆ ನಿದ್ರೆಯಿಂದಿರುವಾಗಲೂ ಅವಶ್ಯಕತೆಗಳನ್ನು ಒದಗಿಸಿಕೊಡುತ್ತಾರೆ.
3ಮಕ್ಕಳು ಯೆಹೋವ ದೇವರು ಕೊಟ್ಟ ಸೊತ್ತು. ಗರ್ಭಫಲವು ದೇವರ ಬಹುಮಾನ.
4ಯೌವನದಲ್ಲಿ ಹುಟ್ಟಿದ ಮಕ್ಕಳು, ಯುದ್ಧವೀರನ ಕೈಯಲ್ಲಿಯ ಬಾಣಗಳಂತಿದ್ದಾರೆ.
5ಬಾಣಗಳನ್ನು ಬತ್ತಳಿಕೆಯಿಂದ ತುಂಬಿಸಿಕೊಂಡಿರುವವರು ಧನ್ಯರು, ಶತ್ರುಗಳ ಸಂಗಡ ನ್ಯಾಯಾಲಯದಲ್ಲಿ ವಾದಿಸುವಾಗ ಅವರು ನಾಚಿಕೆಪಡರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.