Older and younger women and men teaching, serving, and working together in a first-century courtyard

ತೀತನಿಗೆ 2

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಹಿರಿಯರಿಗೂ ಕಿರಿಯರಿಗೂ ದಾಸರಾದ ವಿಶ್ವಾಸಿಗಳಿಗೂ ಸ್ವಸ್ಥ ಬೋಧನೆಗೆ ಹೊಂದಿಕೊಳ್ಳುವ ನಡತೆಯನ್ನು ತೀತನು ಬೋಧಿಸಬೇಕು. ದೇವರ ರಕ್ಷಣೆಯ ಕೃಪೆಯು ನಾಶಕರ ಆಶೆಗಳನ್ನು ತಿರಸ್ಕರಿಸಲು, ನೀತಿಯಿಂದ ಜೀವಿಸಲು, ನಿರೀಕ್ಷೆಯನ್ನು ಎದುರುನೋಡಲು ಮತ್ತು ಒಳ್ಳೆಯ ಕಾರ್ಯಗಳಲ್ಲಿ ಆಸಕ್ತರಾಗಲು ಜನರನ್ನು ತರಬೇತುಗೊಳಿಸುತ್ತದೆ.
ಸ್ವಸ್ಥ ಬೋಧನೆತಲೆಮಾರುಗಳ ಮಾದರಿಕೃಪೆಒಳ್ಳೆಯ ಕಾರ್ಯಗಳು
1ನೀನಾದರೋ ಸ್ವಸ್ಥಬೋಧನೆಗೆ ಅನುಗುಣವಾಗಿ ಉಪದೇಶಿಸು.
2ವೃದ್ಧರು ಆತ್ಮ ಸಂಯಮವುಳ್ಳವರೂ ಗೌರವಕ್ಕೆ ಯೋಗ್ಯರೂ ಸ್ವಯಂನಿಯಂತ್ರಿತರೂ ನಂಬಿಕೆ, ಪ್ರೀತಿ, ತಾಳ್ಮೆ ಇವುಗಳಲ್ಲಿ ಬದಲಾಗದವರೂ ಆಗಿರಬೇಕೆಂದು ಉಪದೇಶಿಸು.
3ಅದೇ ಪ್ರಕಾರ, ವೃದ್ಧಸ್ತ್ರೀಯರು ನಡತೆಯಲ್ಲಿ ಭಕ್ತಿಗೆ ತಕ್ಕ ಹಾಗೆ ಇರುವವರಾಗಿರಬೇಕು. ಅವರು ಸುಳ್ಳಾಗಿ ದೂರುವವರೂ ಮದ್ಯಾಸಕ್ತರೂ ಆಗಿರದೆ, ಒಳ್ಳೆಯವುಗಳನ್ನು ಬೋಧಿಸುವವರಾಗಿರಬೇಕು ಎಂದು ಅವರಿಗೆ ಉಪದೇಶಿಸು.
4ಇದಲ್ಲದೆ ದೇವರ ವಾಕ್ಯವು ದೂಷಣೆಯಾಗದಂತೆ ಯೌವನ ಸ್ತ್ರೀಯರು ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸುವವರೂ
5ಸ್ವಶಿಸ್ತನ್ನು ಹೊಂದಿದವರೂ ಪತಿವ್ರತೆಯರೂ ಮನೆಯಲ್ಲಿ ಕೆಲಸ ಮಾಡುವವರೂ ದಯೆವುಳ್ಳವರೂ ತಮ್ಮ ಗಂಡಂದಿರಿಗೆ ಅಧೀನರೂ ಆಗಿರಬೇಕೆಂದು ವೃದ್ಧಸ್ತ್ರೀಯರಿಂದ ಕಲಿತುಕೊಳ್ಳಿರಿ.
6ಹಾಗೆಯೇ, ಯೌವನಸ್ಥರು ಆತ್ಮ ಸ್ವಶಿಸ್ತನ್ನು ಹೊಂದಿದವರಾಗಿರಬೇಕೆಂದು ಅವರನ್ನು ಪ್ರೋತ್ಸಾಹಿಸು.
7ಎಲ್ಲಾ ವಿಷಯಗಳಲ್ಲಿ ನಿನ್ನನ್ನು ಸತ್ಕಾರ್ಯ ಮಾಡುವುದರಲ್ಲಿ ಆದರ್ಶವಾಗಿ ತೋರಿಸು. ಬೋಧನೆಯಲ್ಲಿ ಪ್ರಾಮಾಣಿಕತೆಯನ್ನೂ ಗಂಭೀರತೆಯನ್ನೂ
8ನಿಂದೆಗೆ ಹೊರತಾದ ಸ್ವಸ್ಥ ಮಾತುಗಳನ್ನಾಡುವವನಾಗಿರು. ಇದರಿಂದ ವಿರೋಧಿಸುವವನು ನಿನ್ನ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕಾಗದೆ ನಾಚಿಕೆ ಪಡುವನು.
9ಸೇವಕರು ತಮ್ಮ ಸ್ವಂತ ಯಜಮಾನರಿಗೆ ಅಧೀನರಾಗಿದ್ದು ಎಲ್ಲವುಗಳಲ್ಲಿ ಅವರನ್ನು ಮೆಚ್ಚಿಸುವವರಾಗಿ ಎದುರು ಮಾತನಾಡದೆ,
10ಯಾವುದನ್ನೂ ಕದ್ದಿಟ್ಟುಕೊಳ್ಳದೆ, ನಮ್ಮ ರಕ್ಷಕರಾದ ದೇವರ ಉಪದೇಶವನ್ನು ಎಲ್ಲಾ ವಿಷಯಗಳಲ್ಲಿಯೂ ಅಲಂಕರಿಸುವಂತೆ, ಒಳ್ಳೆಯ ನಂಬಿಗಸ್ತರೆಂದು ಎಲ್ಲದರಲ್ಲಿಯೂ ತೋರಿಸಬೇಕೆಂದು ಅವರನ್ನು ಉಪದೇಶಿಸು.
11ಏಕೆಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನು ತರುವ ದೇವರ ಕೃಪೆಯೂ ಪ್ರತ್ಯಕ್ಷವಾಯಿತು.
12ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು, ಈಗಿನ ಲೋಕದಲ್ಲಿ ಸ್ವಶಿಸ್ತನ್ನು ಹೊಂದಿದವವರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕಬೇಕೆಂತಲೂ ದೇವರ ಕೃಪೆಯು ನಮಗೆ ಬೋಧಿಸುತ್ತದೆ.
13ನಮಗೆ ರಕ್ಷಕರೂ ಮಹಾ ದೇವರೂ ಆಗಿರುವ ಕ್ರಿಸ್ತ ಯೇಸುವಿನ ಭಾಗ್ಯಕರವಾದ ಮಹಿಮೆಯ ಪ್ರತ್ಯಕ್ಷತೆಯ ನಿರೀಕ್ಷೆಯನ್ನೂ ಎದುರು ನೋಡುತ್ತಿರಬೇಕೆಂದು ಕೃಪೆಯು ನಮಗೆ ಬೋಧಿಸುತ್ತದೆ.
14ಕ್ರಿಸ್ತ ಯೇಸು ನಮ್ಮನ್ನು ಎಲ್ಲಾ ದುಷ್ಟತನದಿಂದ ವಿಮೋಚಿಸಿ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಂತ ಜನರನ್ನು ತಮಗಾಗಿ ಪರಿಶುದ್ಧ ಮಾಡುವಂತೆ ನಮಗೋಸ್ಕರ ತಮ್ಮನ್ನು ತಾವೇ ಒಪ್ಪಿಸಿಕೊಟ್ಟರು.
15ಈ ಕಾರ್ಯಗಳ ವಿಷಯದಲ್ಲಿ, ನೀನು ಉಪದೇಶಿಸುತ್ತಾ ಇರು. ಪ್ರೋತ್ಸಾಹಮಾಡುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.