Families from many lands gather with musicians and dancers inside Jerusalem's open gates

ಕೀರ್ತನೆಗಳು 87

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 87 ಆಶ್ಚರ್ಯಕರವಾಗಿ ದೂರದವರೆಗೆ ವಿಸ್ತರಿಸುವ ಪೌರತ್ವವುಳ್ಳ ಪ್ರಿಯ ಅಸ್ತಿವಾರವಾಗಿ ಚೀಯೋನನ್ನು ಸ್ತುತಿಸುತ್ತದೆ. ಹಿಂದಿನ ಹೊರಗಿನವರೂ ದೂರದ ಜನರೂ ಅಲ್ಲಿ ಹುಟ್ಟಿದವರೆಂದು ಎಣಿಸಲ್ಪಡುತ್ತಾರೆ, ಮತ್ತು ಹಾಡುವವರೂ ನರ್ತಿಸುವವರೂ ಪಟ್ಟಣವನ್ನು ಹಂಚಿಕೊಂಡ ಮೂಲವಾಗಿ ಕೊಂಡಾಡುತ್ತಾರೆ.
ಚೀಯೋನ್ಜನಾಂಗಗಳುಸೇರುವಿಕೆಆಚರಣೆ
1ಯೆಹೋವ ದೇವರು ತಮ್ಮ ಪಟ್ಟಣದ ಅಸ್ತಿವಾರವನ್ನು ಪರಿಶುದ್ಧ ಪರ್ವತದಲ್ಲಿ ಸ್ಥಾಪಿಸಿದ್ದಾರೆ.
2ದೇವರು ಚೀಯೋನಿನ ದ್ವಾರಗಳನ್ನು ಯಾಕೋಬನ ಎಲ್ಲಾ ನಿವಾಸಗಳಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಾರೆ.
3ದೇವರ ಪಟ್ಟಣವೇ, ನಿನ್ನ ವಿಷಯವಾದ ಮಹಿಮೆಯು ಏನೆಂದರೆ,
4“ರಾಹಬ್, ಬಾಬೆಲ್ ದೇಶಗಳವರನ್ನು, ನನ್ನನ್ನು ಬಲ್ಲವರಲ್ಲಿ ಎಣಿಸುವೆನು. ಇಗೋ, ಫಿಲಿಷ್ಟಿಯ, ಟೈರ್, ಕೂಷ್ ಜನಾಂಗಗಳು, ‘ಚೀಯೋನಿನಲ್ಲೇ ಹುಟ್ಟಿದವು.’ ”
5ಚೀಯೋನಿನ ವಿಷಯವಾಗಿ, “ಸಕಲ ಜನಾಂಗದವರೂ ಚೀಯೋನಿನಲ್ಲಿ ಹುಟ್ಟಿದರು. ಮಹೋನ್ನತರೇ ಅದನ್ನು ಸ್ಥಿರಪಡಿಸುವರು,” ಎಂದು ಹೇಳುವರು.
6ಯೆಹೋವ ದೇವರು ಜನಾಂಗಗಳ ಗ್ರಂಥದಲ್ಲಿ ಬರೆಯುವಾಗ, “ಚೀಯೋನಿನಲ್ಲಿ ಇವನು ಹುಟ್ಟಿದನು,” ಎಂದು ಬರೆಯುವರು.
7“ನನ್ನ ಎಲ್ಲಾ ಬುಗ್ಗೆಗಳು ನಿಮ್ಮಲ್ಲಿಯೇ ಇವೆ,” ಎಂದು ಸಂಗೀತಕಾರರು ಹಾಡುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.