Leaders examine cracked earth and regional harvest symbols as a community raises a torn banner

ಕೀರ್ತನೆಗಳು 60

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 60 ಸೇನಾ ಸೋಲನ್ನು ಬಿರುಕುಬಿಟ್ಟ ನೆಲ ಮತ್ತು ತಿರಸ್ಕೃತ ಸೈನ್ಯಗಳಾಗಿ ಪ್ರಲಾಪಿಸುತ್ತದೆ, ಆದರೂ ಪ್ರತಿಯೊಂದು ಪ್ರದೇಶದ ಮೇಲೆ ದೈವಿಕ ಸಾರ್ವಭೌಮತ್ವವನ್ನು ಗುರುತಿಸುತ್ತದೆ. ಜನಾಂಗವು ಪುನಃಸ್ಥಾಪನೆಯನ್ನು ಕೇಳಿ, ಧ್ವಜದ ಕೆಳಗೆ ಒಟ್ಟುಗೂಡಿ, ಕೇವಲ ಮಾನವ ರಕ್ಷಣೆಯಲ್ಲಿನ ಭರವಸೆಯನ್ನು ತಿರಸ್ಕರಿಸುತ್ತದೆ.
ಸಮುದಾಯದ ಪ್ರಲಾಪಸಾರ್ವಭೌಮತ್ವಪುನಃಸ್ಥಾಪನೆಸಹಾಯ
1ದೇವರೇ, ನನ್ನನ್ನು ಕೈಬಿಟ್ಟಿದ್ದೀರಾ? ನನ್ನನ್ನು ಚದರಿಸಿದ್ದೀರಾ? ನಮ್ಮ ಕಡೆಗೆ ಬೇಸರಗೊಂಡರೂ ನಮ್ಮನ್ನು ಪುನಃ ಸ್ಥಾಪಿಸಿರಿ.
2ದೇಶವು ಕಂಪನಗೊಂಡು ಒಡೆದುಹೋಗಿದೆ. ಅದರ ಬಿರುಕುಗಳನ್ನು ಸ್ವಸ್ಥಮಾಡಿರಿ, ಅದು ನಡುಗುತ್ತಿದೆ.
3ನಿಮ್ಮ ಜನರಿಗೆ ಕಠಿಣ ಕಾಲಗಳನ್ನು ನೀವು ತೋರಿಸಿದ್ದೀರಿ. ನಾವು ಭ್ರಮಣಗೊಳಿಸುವ ದ್ರಾಕ್ಷಾರಸವನ್ನು ಕುಡಿದವರಂತೆ ಆದೆವು.
4ನಿಮ್ಮ ಭಕ್ತರಿಗೆ ಧ್ವಜವನ್ನು ನಿಲ್ಲಿಸಿದ್ದೀರಿ. ಶತ್ರುಗಳ ಬಿಲ್ಲಿನ ವಿರುದ್ಧ ಹಾರಿಸಬಹುದಾದ ಧ್ವಜವನ್ನೇ ನೀಡಿದ್ದೀರಿ.
5ನೀವು ಪ್ರೀತಿಸುವವರು ಬಿಡುಗಡೆಯಾಗುವಂತೆ ನಿಮ್ಮ ಬಲಗೈಯಿಂದ ರಕ್ಷಿಸಿ ನಮಗೆ ಸಹಾಯಮಾಡಿರಿ.
6ದೇವರು ತಮ್ಮ ಪರಿಶುದ್ಧ ಸ್ಥಳದಿಂದ ಹೀಗೆ ನುಡಿದಿದ್ದಾರೆ: “ನಾನು ಜಯದಿಂದ ಶೆಕೆಮ್ ಪ್ರದೇಶವನ್ನು ಹಂಚುವೆನು. ಸುಕ್ಕೋತಿನ ತಗ್ಗನ್ನು ಅಳತೆ ಮಾಡುವೆನು.
7ಗಿಲ್ಯಾದ್ ನನ್ನದು; ಮನಸ್ಸೆ ನನ್ನದು, ಎಫ್ರಾಯೀಮ್ ನನ್ನ ಶಿರಸ್ತ್ರಾಣ, ಯೆಹೂದವು ನನ್ನ ರಾಜದಂಡ.
8ಮೋವಾಬ್ ನನ್ನ ಸ್ನಾನ ಪಾತ್ರೆಯು, ಎದೋಮ್ ನನ್ನ ಕೆರಗಳ ಸ್ಥಳ. ಫಿಲಿಷ್ಟಿಯರ ಮೇಲೆ ಜಯೋತ್ಸಾಹ ಮಾಡುವೆನು.”
9ಕೋಟೆಯ ಪಟ್ಟಣಕ್ಕೆ ನನ್ನನ್ನು ಕರೆತರುವವರು ಯಾರು? ಎದೋಮಿಗೆ ನನ್ನನ್ನು ನಡೆಸುವವರು ಯಾರು?
10ದೇವರೇ, ಈಗ ನೀವು ನಮ್ಮ ಸೈನ್ಯಗಳ ಸಂಗಡ ಹೊರಡುವುದಿಲ್ಲವೋ ನಮ್ಮನ್ನು ಕೈಬಿಟ್ಟಿದ್ದೀರೋ?
11ವೈರಿಗಳ ವಿರೋಧ ನಮಗೆ ಸಹಾಯಮಾಡಿರಿ. ಮನುಷ್ಯರ ಸಹಾಯವು ವ್ಯರ್ಥ.
12ದೇವರಿಂದ ನಾವು ಜಯ ಹೊಂದುವೆವು. ದೇವರೇ ನಮ್ಮ ವೈರಿಗಳನ್ನು ತುಳಿದುಬಿಡುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.