A sick man prays from bed while companions wait and sunrise enters the room

ಕೀರ್ತನೆಗಳು 6

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 6 ದೇಹದ ದುರ್ಬಲತೆ, ಭಯ ಮತ್ತು ದಣಿಸುವ ಕಣ್ಣೀರಿಗೆ ಧ್ವನಿ ನೀಡುತ್ತದೆ. ತನ್ನ ಮೊರೆ ಕೇಳಲ್ಪಟ್ಟಿದೆ ಮತ್ತು ಬೆದರಿಸುವ ವಿರೋಧವು ಕೊನೆಗೆ ಹಿಂದೆ ಸರಿಯುವುದು ಎಂಬ ಭರವಸೆ ಕೀರ್ತನೆಗಾರನಿಗೆ ಬಂದಾಗ ಪ್ರಲಾಪವು ತಿರುಗುತ್ತದೆ.
ಪ್ರಲಾಪಸ್ವಸ್ಥತೆಕಣ್ಣೀರುಭರವಸೆ
1ಯೆಹೋವ ದೇವರೇ, ನೀವು ಬೇಸರದಿಂದ ನನ್ನನ್ನು ಗದರಿಸಬೇಡಿರಿ, ರೋಷದಿಂದಲೂ ನನ್ನನ್ನು ದಂಡಿಸಬೇಡಿರಿ.
2ಯೆಹೋವ ದೇವರೇ, ನನ್ನನ್ನು ಕರುಣಿಸಿರಿ, ನಾನು ಬಲಹೀನನಾಗಿದ್ದೇನೆ; ಯೆಹೋವ ದೇವರೇ, ನನ್ನನ್ನು ಸ್ವಸ್ಥಮಾಡಿರಿ, ನನ್ನ ಎಲುಬುಗಳು ಬಹು ವ್ಯಥೆಗೊಳಗಾಗಿವೆ.
3ನನ್ನ ಪ್ರಾಣವು ಬಹು ಸಂಕಟದಲ್ಲಿದೆ. ಎಲ್ಲಿಯತನಕ, ಯೆಹೋವ ದೇವರೇ, ಇನ್ನೂ ಎಲ್ಲಿಯತನಕ?
4ಯೆಹೋವ ದೇವರೇ, ನನ್ನ ಕಡೆಗೆ ಹಿಂದಿರುಗಿರಿ, ನನ್ನನ್ನು ಬಿಡುಗಡೆ ಮಾಡಿರಿ; ನಿಮ್ಮ ಒಡಂಬಡಿಕೆಯ ಪ್ರೀತಿಯ ನಿಮಿತ್ತ ನನ್ನನ್ನು ರಕ್ಷಿಸಿರಿ.
5ಸತ್ತವರಲ್ಲಿ ನಿಮ್ಮನ್ನು ಸ್ಮರಿಸುವವರಿಲ್ಲ. ಪಾತಾಳದಲ್ಲಿ ನಿಮ್ಮನ್ನು ಸ್ತುತಿಸುವವರು ಯಾರು?
6ನನ್ನ ನರಳಾಟದಿಂದ ದಣಿದು ಹೋಗಿದ್ದೇನೆ. ರಾತ್ರಿಯೆಲ್ಲಾ ನಾನು ಅಳುವುದರಿಂದ ನನ್ನ ಹಾಸಿಗೆಯು ಕಣ್ಣೀರಿನ ಪ್ರವಾಹದಿಂದ ತೇಲಾಡುತ್ತದೆ, ಕಣ್ಣೀರಿನಿಂದ ನನ್ನ ಮಂಚವನ್ನು ತೊಯಿಸಿದ್ದೇನೆ.
7ದುಃಖದಿಂದ ನನ್ನ ಕಣ್ಣುಗಳು ಬಲಹೀನವಾಗಿವೆ, ನನ್ನ ಸಕಲ ವೈರಿಗಳಿಂದ ಅವು ಮೊಬ್ಬಾಗಿವೆ.
8ಕೆಟ್ಟದ್ದನ್ನು ಮಾಡುವವರೇ, ನೀವೆಲ್ಲರು ನನ್ನಿಂದ ತೊಲಗಿಹೋಗಿರಿ, ಏಕೆಂದರೆ ಯೆಹೋವ ದೇವರು ನನ್ನ ಗೋಳಾಟವನ್ನು ಕೇಳಿದ್ದಾರೆ.
9ಯೆಹೋವ ದೇವರು ನಾನು ಕರುಣೆಗಾಗಿ ಕೇಳಿದ ನನ್ನ ಮೊರೆಯನ್ನು ಆಲಿಸಿದ್ದಾರೆ; ಯೆಹೋವ ದೇವರು ನನ್ನ ಪ್ರಾರ್ಥನೆಯನ್ನು ಸ್ವೀಕರಿಸುವರು.
10ನನ್ನ ಶತ್ರುಗಳೆಲ್ಲರೂ ನಾಚಿಕೆಪಟ್ಟು ತತ್ತರಿಸುವರು; ಕ್ಷಣಮಾತ್ರದಲ್ಲಿ ಅವರು ಅವಮಾನಗೊಂಡು ಹಿಂದಿರುಗಿ ಹೋಗುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.