
ಕೀರ್ತನೆಗಳು 47
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದೇವರು ಎಲ್ಲಾ ಜನಾಂಗಗಳ ಮೇಲೆ ಆಳುವ ಕಾರಣ ಚಪ್ಪಾಳೆ ತಟ್ಟಿ, ಆರ್ಭಟಿಸಿ, ತಿಳುವಳಿಕೆಯಿಂದ ಹಾಡುವಂತೆ ಕೀರ್ತನೆ 47 ಪ್ರತಿಯೊಂದು ಜನರನ್ನು ಆಹ್ವಾನಿಸುತ್ತದೆ. ಸಿಂಹಾಸನಾರೋಹಣದ ಚಿತ್ರಣವು ಉತ್ಸಾಹದ ಆಚರಣೆಯನ್ನು ಸಾರ್ವತ್ರಿಕ ಸಾರ್ವಭೌಮತ್ವ ಮತ್ತು ಜ್ಞಾನದ ಸ್ತುತಿಯೊಂದಿಗೆ ಸೇರಿಸುತ್ತದೆ.
ಅರಸುತನಜನಾಂಗಗಳುಸ್ತುತಿಸಾರ್ವಭೌಮತ್ವ
1ಎಲ್ಲಾ ಜನರೇ, ಕೈ ತಟ್ಟಿರಿ; ಜಯಾರ್ಭಟದಿಂದ ದೇವರಿಗೆ ಧ್ವನಿಗೈಯಿರಿ.
2ಏಕೆಂದರೆ ಮಹೋನ್ನತರಾದ ಯೆಹೋವ ದೇವರು ಭಯಭಕ್ತಿಗೆ ಪಾತ್ರರೂ ಭೂಮಿಯ ಮೇಲೆಲ್ಲಾ ಮಹಾರಾಜರೂ ಆಗಿದ್ದಾರೆ.
3ಜನರನ್ನು ನಮ್ಮ ಕೆಳಗೆ ತಂದಿದ್ದಾರೆ. ಜನಾಂಗಗಳನ್ನು ನಮಗೆ ಅಧೀನಮಾಡಿದ್ದಾರೆ.
4ಅವರು ಪ್ರೀತಿಸುವ ಯಾಕೋಬಿನ ಘನತೆಯಾಗಿರುವ ನಮ್ಮ ಬಾಧ್ಯತೆಯನ್ನು ನಮಗಾಗಿ ಆಯ್ದುಕೊಂಡಿದ್ದಾರೆ.
5ದೇವರು ಜಯಘೋಷದಿಂದ ಉನ್ನತರಾಗಿದ್ದಾರೆ. ಯೆಹೋವ ದೇವರು ತುತೂರಿಯ ಧ್ವನಿಯೊಡನೆ ಸಾಗಿದ್ದಾರೆ.
6ದೇವರಿಗೆ ಸ್ತುತಿಯನ್ನು ಹಾಡಿರಿ, ಸ್ತುತಿಯನ್ನು ಹಾಡಿರಿ; ನಮ್ಮ ರಾಜರಿಗೆ ಸ್ತುತಿಯನ್ನು ಹಾಡಿರಿ, ಸ್ತುತಿಯನ್ನು ಹಾಡಿರಿ.
7ಏಕೆಂದರೆ, ದೇವರು ಭೂಮಿಗೆಲ್ಲಾ ಮಹಾರಾಜರು. ದೇವರನ್ನು ಸ್ತೋತ್ರದ ಕೀರ್ತನೆಯಿಂದ ಕೀರ್ತಿಸಿರಿ.
8ದೇವರು ಜನಾಂಗಗಳನ್ನು ಆಳುತ್ತಾರೆ. ದೇವರು ತಮ್ಮ ಪರಿಶುದ್ಧ ಸಿಂಹಾಸನದಲ್ಲಿ ಕೂತಿದ್ದಾರೆ.
9ರಾಷ್ಟ್ರಗಳ ಅಧಿಪತಿಗಳು ಅಬ್ರಹಾಮನ ದೇವರ ಜನರಾಗಿ ಕೂಡಿಬಂದಿದ್ದಾರೆ. ಏಕೆಂದರೆ, ಭೂಮಿಯ ರಾಜರೆಲ್ಲರೂ ದೇವರಿಗೆ ಸೇರಿದವರು. ದೇವರು ಬಹಳವಾಗಿ ಘನ ಹೊಂದಿದ್ದಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.