A peaceful toddler rests against his mother beneath an olive tree overlooking Jerusalem

ಕೀರ್ತನೆಗಳು 131

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 131 ಅಹಂಕಾರ, ದೊಡ್ಡ ಮಹತ್ವಾಕಾಂಕ್ಷೆ ಮತ್ತು ವಿಶ್ರಾಂತಿಯಿಲ್ಲದ ಬಯಕೆಯನ್ನು ತಿರಸ್ಕರಿಸಿ ಶಾಂತ ಅವಲಂಬನೆಯನ್ನು ಆರಿಸಿಕೊಳ್ಳುತ್ತದೆ. ಮಾತನಾಡುವವನ ಒಳಜೀವನವು ತಾಯಿಯೊಂದಿಗೆ ತೃಪ್ತಿಯಿಂದ ವಿಶ್ರಮಿಸುವ ಮೊಲೆ ಬಿಡಿಸಿದ ಮಗುವಿನಂತಾಗಿ, ಸಮುದಾಯವನ್ನು ಶಾಶ್ವತ ನಿರೀಕ್ಷೆಗೆ ಆಹ್ವಾನಿಸುತ್ತದೆ.
ದೀನತೆತೃಪ್ತಿಭರವಸೆನಿರೀಕ್ಷೆ
1ಯೆಹೋವ ದೇವರೇ, ನನ್ನ ಹೃದಯವು ಗರ್ವದ್ದಲ್ಲ, ನನಗೆ ಸೊಕ್ಕಿನ ಕಣ್ಣಿಲ್ಲ ದೊಡ್ಡ ವಿಷಯಗಳಲ್ಲಿಯೂ ನನಗೆ ನಿಲುಕಲಾರದವುಗಳಲ್ಲಿಯೂ ನಾನು ಕೈ ಹಾಕುವುದಿಲ್ಲ.
2ಆದರೆ ಹಾಲುಬಿಡಿಸಿದ ಕೂಸು ತನ್ನ ತಾಯಿಯ ಮಡಿಲಲ್ಲಿರುವಂತೆ ನನ್ನ ಪ್ರಾಣವನ್ನು ಸಮಾಧಾನ ಪಡಿಸಿದ್ದೇನೆ. ನಾನು ತಾಯಿಯ ಮಡಿಲಲ್ಲಿರುವ ಕೂಸಿನಂತೆ ಸಂತೃಪ್ತಿಯಿಂದ ಇದ್ದೇನೆ.
3ಇಸ್ರಾಯೇಲೇ, ಯೆಹೋವ ದೇವರಲ್ಲಿ ನಿನ್ನ ನಿರೀಕ್ಷೆಯನ್ನಿಡು. ಈಗಲೂ, ಎಂದೆಂದಿಗೂ ನಿರೀಕ್ಷೆಯಿಂದಿರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.