A grieving man turns from moonlit sorrow toward dawn and approaching musicians

ಕೀರ್ತನೆಗಳು 13

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 13 ಪ್ರಲಾಪದ ಚಲನೆಯನ್ನು ಸಂಕ್ಷೇಪಿಸುತ್ತದೆ: ದೀರ್ಘ ಪರಿತ್ಯಾಗ, ತುರ್ತು ವಿನಂತಿ, ನವೀಕೃತ ಭರವಸೆ ಮತ್ತು ಹಾಡು. ಸಂದರ್ಭಗಳು ಗಂಭೀರವಾಗಿಯೇ ಉಳಿಯುತ್ತವೆ, ಆದರೂ ನೆನಪಿಸಿಕೊಂಡ ನಂಬಿಗಸ್ತ ಪ್ರೀತಿಯು ಪರಿಹಾರ ಪೂರ್ಣವಾಗಿ ಕಾಣುವ ಮೊದಲೇ ಸ್ತುತಿಯನ್ನು ಸಾಧ್ಯವಾಗಿಸುತ್ತದೆ.
ಪ್ರಲಾಪಕಾಯುವಿಕೆಭರವಸೆಸ್ತುತಿ
1ಯೆಹೋವ ದೇವರೇ, ಎಷ್ಟರವರೆಗೆ ನನ್ನನ್ನು ಮರೆಯುವಿರಿ? ಎಂದೆಂದಿಗೂ ನನ್ನನ್ನು ಮರೆಯುವಿರೋ? ಎಷ್ಟರವರೆಗೆ ನಿಮ್ಮ ಮುಖವನ್ನು ನನ್ನಿಂದ ಮರೆಮಾಡುವಿರಿ?
2ಇನ್ನೆಷ್ಟರವರೆಗೆ ನನ್ನ ಆಲೋಚನೆಗಳೊಂದಿಗೆ ನಾನು ಹೋರಾಡುತ್ತಿರಬೇಕು? ದಿನನಿತ್ಯವು ನಾನು ನನ್ನ ಹೃದಯದಲ್ಲಿ ನೊಂದಿರಬೇಕೆ? ಇನ್ನೆಷ್ಟರವರೆಗೆ ನನ್ನ ಶತ್ರುವು ನನ್ನ ಮೇಲೆ ಜಯ ಹೊಂದಿರಬೇಕು?
3ನನ್ನ ದೇವರಾದ ಯೆಹೋವ ದೇವರೇ, ನನ್ನನ್ನು ನೋಡಿ ನನಗೆ ಸದುತ್ತರ ಕೊಡಿರಿ. ನನಗೆ ಮರಣ ನಿದ್ರೆ ಉಂಟಾಗದಂತೆ ನನ್ನ ಕಣ್ಣುಗಳನ್ನು ಬೆಳಗಿಸಿರಿ.
4“ನಾನು ಅವನನ್ನು ಸೋಲಿಸಿದ್ದೇನೆ,” ಎಂದು ನನ್ನ ಶತ್ರು ಹೇಳದಿರಲಿ, ನಾನು ಬೀಳುವಾಗ ನನ್ನ ಶತ್ರುಗಳು ಆನಂದಿಸದಿರಲಿ.
5ನಾನಾದರೋ ನಿಮ್ಮ ಒಡಂಬಡಿಕೆಯ ಪ್ರೀತಿಯಲ್ಲಿ ಭರವಸೆ ಇಟ್ಟಿದ್ದೇನೆ. ನಿಮ್ಮ ರಕ್ಷಣೆಯಲ್ಲಿ ನನ್ನ ಹೃದಯವು ಉಲ್ಲಾಸಪಡುವುದು.
6ನಾನು ಯೆಹೋವ ದೇವರಿಗೆ ಸ್ತುತಿ ಹಾಡುವೆನು, ಏಕೆಂದರೆ ಅವರು ನನಗೆ ಒಳ್ಳೆಯವರಾಗಿದ್ದಾರೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.