An elder teaches children in a sanctuary courtyard as families distribute food across fertile fields

ಕೀರ್ತನೆಗಳು 111

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 111 ಮಹಿಮೆಯ ಕಾರ್ಯಗಳು, ಕೃಪೆಯ ಪೂರೈಕೆ, ಒಡಂಬಡಿಕೆಯ ನಂಬಿಗಸ್ತಿಕೆ ಮತ್ತು ಶಾಶ್ವತ ನ್ಯಾಯವನ್ನು ಸ್ತುತಿಸುತ್ತದೆ. ಎಚ್ಚರಿಕೆಯ ಸಮುದಾಯದ ನೆನಪು ಭಯಭಕ್ತಿಯ ಜ್ಞಾನಕ್ಕೂ ಅಭ್ಯಾಸದ ತಿಳುವಳಿಕೆಗೂ ಒಂದು ತಲೆಮಾರನ್ನು ಮೀರಿ ಮುಂದುವರಿಯುವ ಕೃತಜ್ಞತೆಯ ಸ್ತುತಿಗೂ ನಡೆಸುತ್ತದೆ.
ಕಾರ್ಯಗಳುಒಡಂಬಡಿಕೆಜ್ಞಾನಸ್ತುತಿ
1ಯೆಹೋವ ದೇವರನ್ನು ಸ್ತುತಿಸಿರಿ. ನಾನು ಯೆಹೋವ ದೇವರನ್ನು ಪೂರ್ಣಹೃದಯದಿಂದ ಯಥಾರ್ಥರ ಕೂಟದಲ್ಲಿಯೂ, ಸಭೆಯಲ್ಲಿಯೂ ಕೊಂಡಾಡುವೆನು.
2ಯೆಹೋವ ದೇವರ ಕೆಲಸಗಳು ದೊಡ್ಡವು; ಅವುಗಳಲ್ಲಿ ಸಂತೋಷ ಪಡುವವರೆಲ್ಲರು ಅವುಗಳನ್ನೇ ಧ್ಯಾನಿಸುತ್ತಾರೆ.
3ದೇವರ ಕೆಲಸವು ಘನತೆಯೂ, ಮಹಿಮೆಯೂ ಉಳ್ಳದ್ದು; ದೇವರ ನೀತಿಯು ಎಂದೆಂದಿಗೂ ನಿಲ್ಲುವುದು.
4ದೇವರು ತಮ್ಮ ಅದ್ಭುತಗಳ ಜ್ಞಾಪಕವನ್ನು ಉಳಿದಿರುವಂತೆ ಮಾಡಿದ್ದಾರೆ; ಯೆಹೋವ ದೇವರು ಕೃಪೆಯೂ, ಅನುಕಂಪವೂ ಉಳ್ಳವರು.
5ಅವರು ತಮಗೆ ಭಯಪಡುವವರಿಗೆ ಆಹಾರ ಕೊಟ್ಟಿದ್ದಾರೆ; ಯುಗಯುಗಕ್ಕೂ ತಮ್ಮ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವರು.
6ಜನಾಂಗಗಳ ಬಾಧ್ಯತೆಯನ್ನು ಅವರಿಗೆ ಕೊಡುವ ಹಾಗೆ ದೇವರು ಶಕ್ತಿಯ ಕ್ರಿಯೆಗಳನ್ನು ತಮ್ಮ ಜನರಿಗೆ ತಿಳಿಸಿದ್ದಾರೆ.
7ದೇವರ ಕೈಕೆಲಸಗಳು ಸತ್ಯವೂ, ನ್ಯಾಯವೂ ಆಗಿವೆ; ಅವರ ಸೂತ್ರಗಳೆಲ್ಲಾ ವಿಶ್ವಾಸಕ್ಕೆ ಯೋಗ್ಯವಾದವುಗಳು.
8ಅವು ಯುಗಯುಗಾಂತರಗಳಿಗೂ ನೆಲೆಯಾಗಿ ನಿಲ್ಲುತ್ತವೆ; ಅವು ಸತ್ಯದಲ್ಲಿಯೂ, ಯಥಾರ್ಥತೆಯಲ್ಲಿಯೂ ಒಳಗೊಂಡಿರುತ್ತದೆ.
9ದೇವರು ತಮ್ಮ ಜನರಿಗೆ ವಿಮೋಚನೆಯನ್ನು ಕಳುಹಿಸಿದರು; ಯುಗಯುಗಕ್ಕೂ ತಮ್ಮ ಒಡಂಬಡಿಕೆಯನ್ನು ಸ್ಥಾಪಿಸಿದ್ದಾರೆ; ದೇವರ ಹೆಸರು ಪರಿಶುದ್ಧರು, ಅತಿಶಯರು ಎಂಬುದು.
10ಯೆಹೋವ ದೇವರ ಭಯವು ಜ್ಞಾನದ ಮೂಲವು; ಅವರ ಸೂತ್ರಗಳನ್ನು ಕೈಗೊಳ್ಳುವವರಿಗೆ ಒಳ್ಳೆಯ ತಿಳುವಳಿಕೆ ಉಂಟಾಗುವುದು; ನಿತ್ಯ ಸ್ತೋತ್ರವು ದೇವರಿಗೆ ಸಲ್ಲಲಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.