A priest offers bread and a cup to a kneeling king beside gathered volunteers and abandoned weapons

ಕೀರ್ತನೆಗಳು 110

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 110 ವೈರಿಗಳು ಆಳ್ವಿಕೆಯನ್ನು ಉರುಳಿಸಲಾರದ ದೈವಿಕವಾಗಿ ಅಧಿಕಾರ ಪಡೆದ ಆಡಳಿತಗಾರನನ್ನು ಚಿತ್ರಿಸುತ್ತದೆ. ರಾಜನ ವಿಜಯವು ಮೆಲ್ಕಿಜೆದೇಕನೊಂದಿಗೆ ಸಂಬಂಧಿಸಿದ ಶಾಶ್ವತ ಯಾಜಕತ್ವದೊಂದಿಗೆ ಸೇರುತ್ತದೆ, ಮತ್ತು ಸ್ವಇಚ್ಛೆಯ ಜನರು ಬೆಳಗಿನ ಇಬ್ಬನಿಯ ತಾಜಾತನದೊಂದಿಗೆ ಒಟ್ಟುಗೂಡುತ್ತಾರೆ.
ಅರಸುತನಯಾಜಕತ್ವಅಧಿಕಾರವಿಜಯ
1ಯೆಹೋವ ದೇವರು ನನ್ನ ಕರ್ತ ಆಗಿರುವವರಿಗೆ ಹೇಳಿದ್ದೇನೆಂದರೆ: “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರಿ.”
2ನಿಮ್ಮ ಬಲವಾದ ರಾಜದಂಡವನ್ನು ಯೆಹೋವ ದೇವರು ಚೀಯೋನಿನ ಹೊರಗೂ ವಿಸ್ತರಿಸುವರು. “ನಿಮ್ಮ ಶತ್ರುಗಳ ಮಧ್ಯದಲ್ಲಿ ದೊರೆತನ ಮಾಡಿರಿ,” ಎಂದು ಅವರು ನಿಮಗೆ ಹೇಳುವರು.
3ನೀವು ನಿಮ್ಮ ಸೈನ್ಯವನ್ನು ಒಟ್ಟುಗೂಡಿಸುವ ದಿನದಲ್ಲಿ ನಿಮ್ಮ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಮುಂಜಾನೆಯ ಉದರದಿಂದ ಬರುವ ಇಬ್ಬನಿಯಂತೆ ನಿಮ್ಮ ಯೋಧರು ನಿಮ್ಮ ಕಡೆ ಇಳಿದು ಬರುವರು.
4“ನೀವು ಸದಾಕಾಲವೂ ಮೆಲ್ಕಿಜೆದೇಕನ ಕ್ರಮದ ಯಾಜಕರಾಗಿದ್ದೀರಿ,” ಎಂದು ಯೆಹೋವ ದೇವರು ಆಣೆಯಿಟ್ಟು ಹೇಳಿದ್ದಾರೆ. ಅವರು ತಮ್ಮ ಮನಸ್ಸನ್ನು ಬದಲಾಯಿಸರು.
5ಯೆಹೋವ ದೇವರು ನಿಮ್ಮ ಬಲಗಡೆಯಲ್ಲಿದ್ದಾರೆ; ಅವರು ತಮ್ಮ ತೀರ್ಪಿನ ದಿನದಲ್ಲಿ ಅರಸರನ್ನು ದಂಡಿಸುವರು.
6ದೇವರು ಜನಾಂಗಗಳನ್ನು ನ್ಯಾಯತೀರಿಸುವಾಗ, ವಿಸ್ತಾರವಾದ ರಣರಂಗದಲ್ಲಿ ಶತ್ರುಗಳನ್ನು ದಂಡಿಸಿ ಅವರಿಗೆ ಮರಣದಂಡನೆ ವಿಧಿಸುವರು.
7ಕರ್ತ ಆಗಿರುವವರು ದಾರಿಯುದ್ದಕ್ಕೂ ಹಳ್ಳದಿಂದ ನೀರು ಕುಡಿಯುತ್ತಾ, ಜಯದ ಮಾರ್ಗದಲ್ಲಿ ತಲೆಯೆತ್ತಿ ನಡೆದುಹೋಗುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.