Bildad speaking beneath a vast night sky and dimmed moon

ಯೋಬ 25

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದೇವರ ಅಧಿಪತ್ಯ ಮತ್ತು ಪರಲೋಕದ ಅಸಂಖ್ಯಾತ ಸೈನ್ಯಗಳ ಬಗ್ಗೆ ಬಿಲ್ದದನು ಚಿಕ್ಕ ಕೊನೆಯ ಭಾಷಣ ಮಾಡುತ್ತಾನೆ, ಅವನ ಮುಂದೆ ಉನ್ನತ ಸ್ಥಳಗಳಲ್ಲಿ ಶಾಂತಿ ಸ್ಥಾಪಿಸಲ್ಪಡುತ್ತದೆ. ಚಂದ್ರನೂ ನಕ್ಷತ್ರಗಳೂ ದೇವರ ದೃಷ್ಟಿಯಲ್ಲಿ ಶುದ್ಧವಲ್ಲದಿದ್ದರೆ, ಸ್ತ್ರೀಯಿಂದ ಹುಟ್ಟಿದ ಹುಳುವಾದ ಮನುಷ್ಯನು ಹೇಗೆ ನೀತಿವಂತನಾಗಬಲ್ಲನು ಎಂದು ಅವನು ಕೇಳುತ್ತಾನೆ.
ಬಿಲ್ದದದೈವಿಕ ಅಧಿಪತ್ಯಮಾನವ ದುರ್ಬಲತೆವಿಶ್ವ
1ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೇಳಿದ್ದೇನೆಂದರೆ:
2“ಅಧಿಕಾರ ಮತ್ತು ವಿಸ್ಮಯ ದೇವರಿಗೆ ಸೇರಿದೆ; ಉನ್ನತಲೋಕದಲ್ಲಿ ಸಮಾಧಾನವನ್ನು ಸ್ಥಾಪಿಸಿದವರು ದೇವರೇ.
3ದೇವರ ಸೈನ್ಯಗಳಿಗೆ ಲೆಕ್ಕ ಉಂಟೋ? ಯಾರ ಮೇಲೆ ದೇವರ ಬೆಳಕು ಮೂಡುವುದಿಲ್ಲ?
4ಮನುಷ್ಯನು ದೇವರ ಮುಂದೆ ನೀತಿವಂತನಾಗುವುದು ಹೇಗೆ? ಸ್ತ್ರೀಯಿಂದ ಹುಟ್ಟಿದವನು ಪರಿಶುದ್ಧನಾಗಿರುವುದು ಹೇಗೆ?
5ಇಗೋ, ಚಂದ್ರನೂ ಪ್ರಕಾಶಮಾನವಾಗಿರುವದಿಲ್ಲ; ನಕ್ಷತ್ರಗಳಾದರೂ ದೇವರ ದೃಷ್ಟಿಗೆ ಶುದ್ಧವಾದವುಗಳಲ್ಲ.
6ಹೀಗಿರುವಲ್ಲಿ ಹುಳುವಿನಂಥ ಮನುಷ್ಯನು ದೇವರ ದೃಷ್ಟಿಯಲ್ಲಿ ಎಷ್ಟೋ ಕಡಿಮೆ! ಕ್ರಿಮಿಯಂಥ ಮನವರು ಎಷ್ಟೋ ಅಲ್ಪರು!”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.