Hosea respectfully welcomes his estranged wife at a marketplace beside measured silver and sacks of barley

ಹೋಶೇಯ 3

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ವಿಗ್ರಹಾರಾಧನೆಯ ಹೊರತಾಗಿಯೂ ಇಸ್ರಾಯೇಲಿನ ಮೇಲಿನ ದೈವಿಕ ಪ್ರೀತಿಯನ್ನು ಪ್ರತಿಬಿಂಬಿಸುತ್ತಾ ಅಪನಂಬಿಗಸ್ತ ಸ್ತ್ರೀಯನ್ನು ಮತ್ತೆ ಪ್ರೀತಿಸುವಂತೆ ದೇವರು ಹೋಶೇಯನಿಗೆ ಹೇಳುತ್ತಾನೆ. ಹೋಶೇಯನು ಬೆಳ್ಳಿ ಮತ್ತು ಜವೆಗೋಧಿಗೆ ಅವಳನ್ನು ವಿಮೋಚಿಸಿ ನಂಬಿಗಸ್ತಿಕೆಯ ಅವಧಿಯನ್ನು ಬೇಡುತ್ತಾನೆ, ಇಸ್ರಾಯೇಲಿನ ಕೊರತೆ ಮತ್ತು ದೇವರಿಗೂ ದಾವೀದನ ಆಳ್ವಿಕೆಗೂ ಕೊನೆಯ ಮರಳುವಿಕೆಯನ್ನು ಮುನ್ಸೂಚಿಸುತ್ತಾನೆ.
ವಿಮೋಚನೆಸ್ಥಿರ ಪ್ರೀತಿನಂಬಿಗಸ್ತಿಕೆಮರಳುವಿಕೆ
1ತರುವಾಯ ಯೆಹೋವ ದೇವರು ನನಗೆ, “ಬೇರೆ ದೇವತೆಗಳ ಕಡೆಗೆ ತಿರುಗಿಕೊಂಡು, ದ್ರಾಕ್ಷಿ ಉಂಡೆಗಳನ್ನು ಪ್ರೀತಿಸುವ ಇಸ್ರಾಯೇಲರನ್ನು ಯೆಹೋವ ದೇವರು ಪ್ರೀತಿಸುವ ಪ್ರಕಾರ, ನೀನು ಹೋಗಿ ನಿನ್ನ ಹೆಂಡತಿ ವ್ಯಭಿಚಾರಿಣಿಯಾಗಿದ್ದರೂ ಆಕೆಯನ್ನು ಪುನಃ ಪ್ರೀತಿಸು,” ಎಂದು ಹೇಳಿದನು.
2ಅಂತೆಯೇ ನಾನು ಅವಳನ್ನು ನನಗಾಗಿ ಹದಿನೈದು ಶೆಕೆಲ್ ಬೆಳ್ಳಿ ಮತ್ತು ಸುಮಾರು ಒಂದು ಹೋಮೆರ್ ಹಾಗೂ ಒಂದು ಲೆಥೆಕ ಜವೆಗೋಧಿಗೂ ಕೊಂಡುಕೊಂಡೆನು.
3ನಾನು ಅವಳಿಗೆ, “ನನ್ನೊಂದಿಗೆ ಬಹಳ ದಿವಸಗಳು ನನಗಾಗಿ ಇರಬೇಕು. ನೀನು ವ್ಯಭಿಚಾರವನ್ನು ಮಾಡಬಾರದು. ನೀನು ಬೇರೆ ಪುರುಷನಿಗಾಗಿ ಇರಬಾರದು. ಆಗ ನಿನ್ನೊಂದಿಗೆ ಇರುವೆನು,” ಎಂದು ಹೇಳಿದೆನು.
4ಇಸ್ರಾಯೇಲರು ಬಹಳ ದಿವಸಗಳವರೆಗೆ ಅರಸನಿಲ್ಲದೆ, ರಾಜಕುಮಾರನಿಲ್ಲದೆ, ಬಲಿ ಇಲ್ಲದೆ, ಪವಿತ್ರ ಕಲ್ಲುಗಳಿಲ್ಲದೆ, ಏಫೋದ್ ಇಲ್ಲದೆ ಮತ್ತು ವಿಗ್ರಹಗಳು ಇಲ್ಲದೆ ಇರುವರು.
5ಆಮೇಲೆ ಇಸ್ರಾಯೇಲರು ತಿರುಗಿಕೊಂಡು ಅವರ ದೇವರಾದ ಯೆಹೋವ ದೇವರನ್ನು ಮತ್ತು ಅವರ ಅರಸನಾದ ದಾವೀದನನ್ನು ಹುಡುಕಿಕೊಂಡು, ಅಂತ್ಯ ದಿವಸಗಳಲ್ಲಿ ಯೆಹೋವ ದೇವರನ್ನೂ, ಆತನ ಒಳ್ಳೆಯತನವನ್ನೂ ಭಯಭಕ್ತಿಯಿಂದ ಪಡೆಯುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.