Attendants replace Joshua's stained priestly robes as an accuser watches beside a smooth stone bearing seven inset jewels and a green shoot

ಜೆಕರ್ಯ 3

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಮಹಾಯಾಜಕ ಯೆಹೋಶುವನು ಹೊಲಸು ವಸ್ತ್ರಗಳಲ್ಲಿ ಆರೋಪಿತನಾಗಿ ನಿಲ್ಲುತ್ತಾನೆ, ಆದರೆ ಗದರಿಕೆಯು ಆರೋಪಿಸುವವನ ಮೇಲೆ ಬೀಳುತ್ತದೆ ಮತ್ತು ಯೆಹೋಶುವನ ಅಪರಾಧವು ತೆಗೆಯಲ್ಪಡುತ್ತದೆ. ಶುದ್ಧ ಯಾಜಕ ವಸ್ತ್ರವು ಅವನ ಸೇವೆಯನ್ನು ಪುನಃಸ್ಥಾಪಿಸುತ್ತದೆ. ಬರಲಿರುವ ಚಿಗುರು ಮತ್ತು ಏಳು ಕಣ್ಣುಗಳ ಕಲ್ಲು ನಾಡಿನ ಅಪರಾಧವು ಒಂದೇ ದಿನದಲ್ಲಿ ತೆಗೆಯಲ್ಪಡುವುದೆಂದು ವಾಗ್ದಾನ ಮಾಡುತ್ತವೆ.
ಶುದ್ಧೀಕರಣಮಹಾಯಾಜಕಚಿಗುರುಕ್ಷಮೆ
1ಆತನು ನನಗೆ, ಯೆಹೋವ ದೇವರ ದೂತನ ಮುಂದೆ ನಿಂತಿರುವ ಮಹಾಯಾಜಕನಾದ ಯೆಹೋಶುವನನ್ನೂ, ಅವನ ಮೇಲೆ ದೂರು ಹೇಳುವುದಕ್ಕೆ ಅವನ ಬಲಗಡೆಯಲ್ಲಿ ನಿಂತ ಸೈತಾನನನ್ನೂ ತೋರಿಸಿದನು.
2ಆಗ ಯೆಹೋವ ದೇವರ ದೂತನು ಸೈತಾನನಿಗೆ, “ಸೈತಾನನೇ, ಯೆಹೋವ ದೇವರು ನಿನ್ನನ್ನು ಖಂಡಿಸಲಿ. ಯೆರೂಸಲೇಮನ್ನು ಆಯ್ದುಕೊಂಡ ಯೆಹೋವ ದೇವರು ನಿನ್ನನ್ನು ಖಂಡಿಸಲಿ. ಅದು ಬೆಂಕಿಯೊಳಗಿಂದ ಎಳೆದ ಕೊಳ್ಳಿಯಾಗಿದೆಯಲ್ಲವೋ?” ಎಂದನು.
3ಯೆಹೋಶುವನು ಮೈಲಿಗೆಯಾದ ವಸ್ತ್ರಗಳನ್ನು ತೊಟ್ಟುಕೊಂಡವನಾಗಿ ದೇವದೂತನ ಮುಂದೆ ನಿಂತನು.
4ಆಗ ದೇವದೂತನು ತನ್ನ ಮುಂದೆ ನಿಂತವರಿಗೆ, “ಇವನ ಮೇಲಿನಿಂದ ಮೈಲಿಗೆಯಾದ ವಸ್ತ್ರಗಳನ್ನು ತೆಗೆದುಹಾಕಿರಿ,” ಎಂದನು. ಅನಂತರ ಯೆಹೋಶುವನಿಗೆ, “ನಿನ್ನ ಪಾಪವನ್ನು ತೆಗೆದುಹಾಕಿದ್ದೇನೆ. ಬದಲಾಗಿ ಶ್ರೇಷ್ಠ ವಸ್ತ್ರಗಳನ್ನು ನಿನಗೆ ತೊಡಿಸುವೆನು,” ಎಂದನು.
5ಆಗ ನಾನು, “ಅವನ ತಲೆಯ ಮೇಲೆ ಶುದ್ಧ ಮುಂಡಾಸನ್ನು ಇಡಿರಿ,” ಎಂದೆನು. ಆಗ ಸೇವಕರು ಯೆಹೋಶುವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಟ್ಟು, ಅವನಿಗೆ ವಸ್ತ್ರಗಳನ್ನು ಧರಿಸಿದರು. ಯೆಹೋವ ದೇವರ ದೂತನು ಪಕ್ಕದಲ್ಲಿ ನಿಂತಿದ್ದನು.
6ಆಗ ಯೆಹೋವ ದೇವರ ದೂತನು ಯೆಹೋಶುವನಿಗೆ ಸಾಕ್ಷಿ ಕೊಟ್ಟಿದ್ದೇನೆಂದರೆ,
7“ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನೀನು ನನ್ನ ಮಾರ್ಗಗಳಲ್ಲಿ ನಡೆದು ನನ್ನ ಆಜ್ಞೆಗಳನ್ನು ಕೈಗೊಂಡರೆ, ಆಗ ನೀನು ನನ್ನ ಆಲಯಕ್ಕೂ ನ್ಯಾಯತೀರಿಸಿ, ನನ್ನ ಅಂಗಳಗಳನ್ನೂ ಕಾಯುವೆ. ಇಲ್ಲಿ ನಿಂತವರ ಬಳಿಯಲ್ಲಿ ನಡೆದಾಡುವ ಹಕ್ಕನ್ನು ನಿನಗೆ ಕೊಡುವೆನು.’
8“ಮಹಾಯಾಜಕನಾದ ಯೆಹೋಶುವನೇ, ನೀನೂ, ನಿನ್ನ ಮುಂದೆ ಕುಳಿತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ. ಅವರು ಆಶ್ಚರ್ಯವನ್ನುಂಟುಮಾಡುವ ಮನುಷ್ಯರಾಗಿದ್ದಾರೆ. ನಾನು ‘ರೆಂಬೆ’ ಎಂಬ ನನ್ನ ಸೇವಕನನ್ನು ಬರಮಾಡುವೆನು ಎಂಬುದಕ್ಕೆ ಇವರೇ ಮುಂಗುರುತು.
9ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡು. ಆ ಒಂದು ಕಲ್ಲಿನ ಮೇಲೆ ಏಳು ಕಣ್ಣುಗಳು ಇರುವಂತೆ ನಾನು ಅದರ ಮೇಲೆ ಒಂದು ಶಾಸನವನ್ನು ಕೆತ್ತಿಸುವೆನು. ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಆ ದೇಶದ ಅಪರಾಧವನ್ನು ಒಂದೇ ದಿವಸದಲ್ಲಿ ತೊಲಗಿಸುವೆನು.
10“ ‘ಆ ದಿವಸದಲ್ಲಿ ನೀವು ನಿಮ್ಮ ನಿಮ್ಮ ನೆರೆಯವರನ್ನು ದ್ರಾಕ್ಷಿಬಳ್ಳಿಯ ಕೆಳಗೂ, ಅಂಜೂರದ ಮರದ ಕೆಳಗೂ ಕರೆಯುವಿರಿ,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.