Priests sound trumpets as crowds, waves, hills, and distant nations converge joyfully near Jerusalem

ಕೀರ್ತನೆಗಳು 98

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 98 ಜನಾಂಗಗಳ ನಡುವೆ ಸಾರ್ವಜನಿಕವಾಗಿ ಪ್ರಕಟವಾದ ಅದ್ಭುತ ವಿಜಯವನ್ನು ಕೊಂಡಾಡುತ್ತದೆ. ವೀಣೆಗಳು, ತುತ್ತೂರಿಗಳು, ಸಮುದ್ರಗಳು, ನದಿಗಳು ಮತ್ತು ಪರ್ವತಗಳು ಲೋಕವನ್ನು ನ್ಯಾಯದಿಂದ ತೀರ್ಪುಮಾಡುವ ನೀತಿವಂತ ಆಡಳಿತಗಾರನನ್ನು ಸ್ವಾಗತಿಸುವ ಒಂದೇ ಆನಂದದ ಗಾಯಕವೃಂದವಾಗುತ್ತವೆ.
ಹೊಸ ಹಾಡುವಿಜಯಸೃಷ್ಟಿನ್ಯಾಯ
1ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ; ಏಕೆಂದರೆ ಅವರು ಅದ್ಭುತಗಳನ್ನು ಮಾಡಿದ್ದಾರೆ; ಅವರ ಬಲಗೈಯೂ, ಅವರ ಪರಿಶುದ್ಧ ಭುಜವು ಅವರಿಗೆ ಜಯವನ್ನು ತಂದಿವೆ.
2ಯೆಹೋವ ದೇವರು ತಮ್ಮ ರಕ್ಷಣೆಯನ್ನು ತಿಳಿಯಪಡಿಸಿದ್ದಾರೆ; ರಾಷ್ಟ್ರಗಳಿಗೆ ತಮ್ಮ ನೀತಿಯನ್ನು ಪ್ರಕಟಪಡಿಸಿದ್ದಾರೆ.
3ಇಸ್ರಾಯೇಲರ ಕಡೆಗೆ ತಮ್ಮ ಪ್ರೀತಿಯನ್ನೂ, ತಮ್ಮ ಸತ್ಯತೆಯನ್ನೂ ಜ್ಞಾಪಕ ಮಾಡಿಕೊಂಡಿದ್ದಾರೆ; ಭೂಮಿಯ ಅಂತ್ಯಗಳಲ್ಲೆವೂ ನಮ್ಮ ದೇವರ ರಕ್ಷಣೆಯನ್ನು ನೋಡಿವೆ.
4ಸಮಸ್ತ ಭೂನಿವಾಸಿಗಳೇ, ಯೆಹೋವ ದೇವರಿಗೆ ಆನಂದಘೋಷ ಮಾಡಿರಿ. ಉತ್ಸಾಹಧ್ವನಿ ಮಾಡಿ ಸಂಗೀತದಿಂದ ಸ್ತುತಿಹಾಡಿರಿ.
5ಯೆಹೋವ ದೇವರಿಗೆ ಕಿನ್ನರಿಯಿಂದ ಗಾನಮಾಡಿರಿ. ಕಿನ್ನರಿಯಿಂದಲೂ, ಕೀರ್ತನೆಯ ಶಬ್ದದಿಂದಲೂ ಹಾಡಿರಿ.
6ತುತೂರಿಗಳಿಂದಲೂ, ಹೌದು, ಟಗರಿನ ಕೊಂಬಿನಿಂದಲೂ ಯೆಹೋವ ರಾಜರ ಮುಂದೆ ಆನಂದಘೋಷ ಮಾಡಿರಿ.
7ಸಮುದ್ರವೂ, ಅದರಲ್ಲಿರುವುದೆಲ್ಲವೂ, ಲೋಕವೂ, ಅದರ ನಿವಾಸಿಗಳೂ ಪ್ರತಿಧ್ವನಿಸಲಿ.
8ನದಿಗಳು ಚಪ್ಪಾಳೆ ತಟ್ಟಲಿ. ಬೆಟ್ಟಗಳು ಒಟ್ಟುಗೂಡಿ ಆನಂದ ಕೀರ್ತನೆ ಹಾಡಲಿ.
9ಅವು ಯೆಹೋವ ದೇವರ ಮುಂದೆ ಹಾಡಲಿ, ಏಕೆಂದರೆ ಅವರು ಭೂಮಿಗೆ ನ್ಯಾಯತೀರಿಸಲು ಬರುತ್ತಾರೆ. ಅವರು ಲೋಕಕ್ಕೆ ನೀತಿಗನುಸಾರವಾಗಿಯೂ ಜನರಿಗೆ ನ್ಯಾಯಾನುಸಾರವಾಗಿಯೂ ತೀರ್ಪು ನೀಡುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.