Worshipers with ram's horns, shepherds, and flocks cross rocky hills toward Jerusalem in joyful procession

ಕೀರ್ತನೆಗಳು 95

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 95 ರಕ್ಷಣೆಯ ಬಂಡೆಗೆ ಉತ್ಸಾಹದ ಹಾಡುವಿಕೆಯಿಂದಲೂ ಸೃಷ್ಟಿಕರ್ತನೂ ಕುರುಬನೂ ಆದವನ ಮುಂದೆ ದೀನ ಆರಾಧನೆಯಿಂದಲೂ ಆರಂಭವಾಗುತ್ತದೆ. ಅರಣ್ಯದ ಎಚ್ಚರಿಕೆಯೊಂದಿಗೆ ಕೊನೆಗೊಳ್ಳುತ್ತದೆ: ಕೃತಜ್ಞತೆಯ ಧ್ವನಿಗಳಿಗೆ ಕೇಳುವ, ಸ್ಪಂದಿಸುವ ಹೃದಯಗಳು ಸೇರಬೇಕು.
ಆರಾಧನೆಕುರುಬವಿಧೇಯತೆಎಚ್ಚರಿಕೆ
1ಬನ್ನಿರಿ, ಯೆಹೋವ ದೇವರಿಗೆ ಉತ್ಸಾಹ ಗೀತೆಯನ್ನು ಹಾಡೋಣ; ನಮ್ಮ ರಕ್ಷಣೆಯ ಬಂಡೆಯಾಗಿರುವ ದೇವರಿಗೆ ಜಯಧ್ವನಿ ಮಾಡೋಣ.
2ಧನ್ಯವಾದದೊಡನೆ ಅವರ ಸನ್ನಿಧಿಯಲ್ಲಿ ಮುಂದೆ ಬಂದು ಕೀರ್ತನೆಗಳಿಂದ ಅವರಿಗೆ ಜಯಧ್ವನಿ ಮಾಡೋಣ.
3ಯೆಹೋವ ದೇವರು ಮಹಾ ದೇವರು, ಎಲ್ಲಾ ದೇವರುಗಳ ಮೇಲೆ ಮಹಾರಾಜರೂ ಆಗಿದ್ದಾರೆ.
4ಅವರ ಕೈಯಲ್ಲಿ ಭೂಮಿಯ ಆಳವಾದ ಸ್ಥಳಗಳು ಇವೆ; ಬೆಟ್ಟಗಳ ಬಲವು ಅವರದೇ.
5ಸಮುದ್ರವು ಅವರಿಗೆ ಸೇರಿದ್ದು; ಅವರು ಅದನ್ನು ಸೃಷ್ಟಿಸಿದರು; ಅವರ ಕೈಗಳು ಒಣ ಭೂಮಿಯನ್ನು ರೂಪಿಸಿದವು.
6ಬನ್ನಿರಿ, ಆರಾಧಿಸೋಣ; ನಮ್ಮನ್ನು ಸೃಷ್ಟಿಸಿದ ಯೆಹೋವ ದೇವರ ಮುಂದೆ ಮೊಣಕಾಲು ಊರೋಣ.
7ಅವರು ನಮ್ಮ ದೇವರು; ನಾವು ಅವರ ಹುಲ್ಲುಗಾವಲಿನ ಪ್ರಜೆಗಳಾಗಿದ್ದೇವೆ, ನಾವು ಅವರು ಪರಿಪಾಲಿಸುವ ಮಂದೆಯೂ ಆಗಿದ್ದೇವೆ. ನೀವು ಈ ಹೊತ್ತು ಅವರ ಸ್ವರಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೆಯದು.
8“ನೀವು ಮೆರೀಬದಲ್ಲಿ ಮಾಡಿದಂತೆ, ಹೌದು, ಅಂದು ನೀವು ಮರುಭೂಮಿಯ ಮಸ್ಸಾ ಎಂಬ ಸ್ಥಳದಲ್ಲಿ ಮಾಡಿದಂತೆ, ನಿಮ್ಮ ಹೃದಯವನ್ನು ಕಠಿಣಪಡಿಸಬೇಡಿರಿ.
9ನಾನು ಮಾಡಿದ್ದನ್ನು ಕಂಡಿದ್ದರೂ, ಅಲ್ಲಿ ನಿಮ್ಮ ಪಿತೃಗಳು ನನ್ನನ್ನು ಶೋಧಿಸಿ, ನನ್ನನ್ನು ಪರೀಕ್ಷಿಸಿದರು.
10ನಾಲ್ವತ್ತು ವರ್ಷ ಆ ಸಂತತಿಗೆ ಬೇಸರಗೊಂಡು, ‘ಇವರು ತಮ್ಮ ಹೃದಯದಲ್ಲಿ ತಪ್ಪಿಹೋಗುವ ಜನರಾಗಿದ್ದಾರೆ, ನನ್ನ ಮಾರ್ಗಗಳನ್ನು ಇವರು ಅರಿಯರು,’ ಎಂದೆನು.
11ಆದ್ದರಿಂದ, ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,’ ” ಎಂದು ನಾನು ಅಸಂತೋಷದಿಂದ ಆಣೆ ಇಟ್ಟುಕೊಂಡೆನು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.