An elder praises as neighbors embrace, rain refreshes fields, and harvesters gather beneath clearing clouds

ಕೀರ್ತನೆಗಳು 85

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 85 ಪುನಃಸ್ಥಾಪಿತ ದಯೆಯನ್ನು ನೆನಪಿಸಿಕೊಳ್ಳುತ್ತಾ ನವೀಕೃತ ಜೀವನವನ್ನು ಕೇಳುತ್ತದೆ. ಅದರ ದರ್ಶನವು ಸ್ಥಿರ ಪ್ರೀತಿ, ನಂಬಿಗಸ್ತಿಕೆ, ನೀತಿ ಮತ್ತು ಶಾಂತಿಯನ್ನು ಒಟ್ಟಿಗೆ ತಂದು, ದೈವಿಕ ಒಳ್ಳೆಯತನವೂ ಮಾನವ ಸಮೃದ್ಧಿಯೂ ಸೇರುವ ಫಲಭರಿತ ನಾಡನ್ನು ವಾಗ್ದಾನ ಮಾಡುತ್ತದೆ.
ಪುನಃಸ್ಥಾಪನೆಶಾಂತಿನಂಬಿಗಸ್ತಿಕೆಪುನರುಜ್ಜೀವನ
1ಯೆಹೋವ ದೇವರೇ, ನಿಮ್ಮ ದೇಶವನ್ನು ನೀವು ದಯೆ ತೋರಿಸಿದ್ದೀರಿ. ಯಾಕೋಬನ್ನು ಸೆರೆಯಿಂದ ಹಿಂದಕ್ಕೆ ಬರಮಾಡಿದ್ದೀರಿ.
2ನಿಮ್ಮ ಜನರ ಅಕ್ರಮವನ್ನು ಪರಿಹರಿಸಿದ್ದೀರಿ. ಅವರ ಪಾಪವನ್ನೆಲ್ಲಾ ಮುಚ್ಚಿದ್ದೀರಿ.
3ನಿಮ್ಮ ಕೋಪವನ್ನೆಲ್ಲಾ ತೆಗೆದುಬಿಟ್ಟಿದ್ದೀರಿ. ನಿಮ್ಮ ಬೇಸರದಿಂದ ತಿರುಗಿಕೊಂಡಿದ್ದೀರಿ.
4ನಮ್ಮ ರಕ್ಷಕ ಆಗಿರುವ ದೇವರೇ, ನಮ್ಮನ್ನು ಪುನಃ ಸ್ಥಾಪಿಸಿರಿ, ನಮ್ಮ ಮೇಲಿರುವ ನಿಮ್ಮ ಅಸಂತೋಷವನ್ನು ತೊಲಗಿಸಿರಿ.
5ಎಂದೆಂದಿಗೂ ನಮ್ಮ ಮೇಲೆ ಖಂಡಿಸುವಿರೋ? ತಲತಲಾಂತರಕ್ಕೂ ನಿಮ್ಮ ಬೇಸರ ಬೆಳೆಸುವಿರೋ?
6ನಿಮ್ಮ ಜನರು ನಿಮ್ಮಲ್ಲಿ ಸಂತೋಷಪಡುವಂತೆ ನೀವು ತಿರುಗಿ ನಮ್ಮನ್ನು ಉಜ್ಜೀವಿಸುವುದಿಲ್ಲವೋ?
7ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯನ್ನು ನಮಗೆ ತೋರಿಸಿರಿ. ನಿಮ್ಮ ರಕ್ಷಣೆಯನ್ನು ನಮಗೆ ಕೊಡಿರಿ.
8ಯೆಹೋವ ದೇವರು ಏನು ಹೇಳುತ್ತಾರೋ ಅದನ್ನು ನಾನು ಕೇಳುವೆನು. ದೇವರು ತಮ್ಮ ಜನರಿಗೂ ತಮ್ಮ ಭಕ್ತರಿಗೂ ಸಮಾಧಾನವನ್ನು ವಾಗ್ದಾನಮಾಡುವರು. ಆದರೆ ಅವರ ಜನರು ಇನ್ನು ಬುದ್ಧಿಹೀನತೆಗೆ ತಿರುಗಿಕೊಳ್ಳದೆ ಇರಲಿ.
9ನಿಶ್ಚಯವಾಗಿ ಮಹಿಮೆಯು ನಮ್ಮ ದೇಶದಲ್ಲಿ ವಾಸವಾಗಿರುವ ಹಾಗೆ, ದೇವರಿಗೆ ಭಯಪಡುವವರಿಗೆ ದೇವರ ರಕ್ಷಣೆಯು ಸಮೀಪವಾಗಿದೆ.
10ಪ್ರೀತಿಯೂ ಸತ್ಯತೆಯೂ ಸಂಧಿಸಿಕೊಳ್ಳುತ್ತವೆ. ನೀತಿಯೂ ಸಮಾಧಾನವೂ ಮುದ್ದಿಟ್ಟುಕೊಳ್ಳುತ್ತವೆ.
11ಸತ್ಯವು ಭೂಮಿಯಿಂದ ಮೊಳೆಯುವುದು. ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು.
12ಯೆಹೋವ ದೇವರು ಒಳ್ಳೆಯದನ್ನು ಕೊಡುವರು. ನಮ್ಮ ಭೂಮಿಯು ತನ್ನ ಸುಗ್ಗಿಯನ್ನು ಕೊಡುವುದು.
13ನೀತಿಯು ದೇವರ ಮುಂದೆ ನಡೆದುಕೊಂಡು ಹೋಗಿ, ದೇವರಿಗೆ ಮಾರ್ಗ ಸಿದ್ಧಪಡಿಸುವುದು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.