
ಕೀರ್ತನೆಗಳು 82
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದುರ್ಬಲರು, ಅನಾಥರು, ಬಡವರು ಮತ್ತು ದಬ್ಬಾಳಿಕೆಗೊಳಗಾದವರು ಅಸಹಾಯಕರಾಗಿ ಉಳಿದಿರುವಾಗ ದುಷ್ಟರಿಗೆ ಪಕ್ಷಪಾತ ತೋರುವ ಆಡಳಿತಗಾರರನ್ನು ಕೀರ್ತನೆ 82 ಆರೋಪಿಸುತ್ತದೆ. ಅವರ ಅನ್ಯಾಯವು ಸಮಾಜದ ಅಸ್ತಿವಾರಗಳನ್ನು ಅಲುಗಾಡಿಸುತ್ತದೆ, ನಿಜವಾದ ನ್ಯಾಯಾಧೀಶನು ಸರಿಯಾದ ಕ್ರಮವನ್ನು ಪುನಃಸ್ಥಾಪಿಸಲಿ ಎಂಬ ಮೊರೆಯನ್ನು ಹುಟ್ಟಿಸುತ್ತದೆ.
ನ್ಯಾಯದುರ್ಬಲರುನ್ಯಾಯತೀರ್ಪುನಾಯಕತ್ವ
1ದೇವರು ಮಹಾಸಭೆಯಲ್ಲಿ ಅಧ್ಯಕ್ಷತೆವಹಿಸಿ, ದೇವರುಗಳ ಮಧ್ಯದಲ್ಲಿ ನ್ಯಾಯತೀರಿಸುತ್ತಾರೆ.
2“ಎಷ್ಟರವರೆಗೆ ಅನ್ಯಾಯವಾಗಿ ತೀರ್ಪು ನೀಡುವಿರಿ. ಎಲ್ಲಿಯತನಕ ದುಷ್ಟರಿಗೆ ಮುಖದಾಕ್ಷಿಣ್ಯ ಮಾಡುವಿರಿ?
3ದರಿದ್ರನನ್ನೂ ದಿಕ್ಕಿಲ್ಲದವನನ್ನೂ ಕಾಪಾಡಿರಿ. ದೀನನಿಗೂ, ಬಡವನಿಗೂ ನ್ಯಾಯವನ್ನು ಕೊಡಿರಿ.
4ದರಿದ್ರನನ್ನೂ, ಬಡವನನ್ನೂ ತಪ್ಪಿಸಿರಿ. ಅವರನ್ನು ದುಷ್ಟರ ಕೈಯೊಳಗಿಂದ ಬಿಡಿಸಿರಿ.
5“ದೇವರುಗಳು ಅರಿಯರು ಏನೂ, ಅವರು ಗ್ರಹಿಸುವುದಿಲ್ಲ ಏನೂ. ಅವರು ಕತ್ತಲೆಯಲ್ಲಿ ನಡೆದುಕೊಳ್ಳುತ್ತಾರೆ. ಭೂಮಿಯ ಅಸ್ತಿವಾರಗಳೆಲ್ಲಾ ಕದಲುತ್ತಿದೆ.
6“ನಾನು ಮುಂದುವರೆಸಿ ಅವರಿಗೆ ಹೇಳಿದ್ದು, ‘ನೀವು ದೇವರುಗಳು, ನೀವೆಲ್ಲರು ಮಹೋನ್ನತ ದೇವರ ಮಕ್ಕಳು,’ ಎಂದು ಹೇಳಿದೆನು.
7ಆದರೂ ಕೇವಲ ಮನುಷ್ಯರ ಹಾಗೆ ನೀವು ಸಾಯುವಿರಿ. ಇತರ ನಾಯಕರಂತೆಯೇ ಬಿದ್ದು ಹೋಗುವಿರಿ.”
8ದೇವರೇ, ಬನ್ನಿರಿ ಭೂಮಿಗೆ ನ್ಯಾಯತೀರಿಸಿರಿ. ಏಕೆಂದರೆ ಜನಾಂಗಗಳೆಲ್ಲಾ ನಿಮಗೇ ಸೇರಿರುತ್ತವೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.