
ಕೀರ್ತನೆಗಳು 70
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 70 ಬಿಕ್ಕಟ್ಟನ್ನು ತುರ್ತು ಮೊರೆಯಾಗಿ ಸಂಕ್ಷೇಪಿಸುತ್ತದೆ: ಬೇಗನೆ ಸಹಾಯಕ್ಕೆ ಬಾ. ಬೇಡುವವನು ದುರುದ್ದೇಶದ ಬೆನ್ನಟ್ಟುವವರು ಹಿಂತಿರುಗಲಿ, ಹುಡುಕುವವರು ಸಂತೋಷಪಡಲಿ, ಮತ್ತು ಬಡವರು ವಿಮೋಚನೆಗಾಗಿ ಇನ್ನೂ ಕಾಯುತ್ತಿರುವಾಗ ರಕ್ಷಣೆಯನ್ನು ಪ್ರೀತಿಸುವ ಪ್ರತಿಯೊಬ್ಬರೂ ದೇವರನ್ನು ನಿರಂತರವಾಗಿ ಘನಪಡಿಸಲಿ ಎಂದು ಕೇಳುತ್ತಾನೆ.
ತುರ್ತುವಿಮೋಚನೆದೀನತೆಸಂತೋಷ
1ದೇವರೇ, ನನ್ನನ್ನು ಬಿಡಿಸುವುದಕ್ಕೆ ತ್ವರೆಮಾಡಿರಿ; ಯೆಹೋವ ದೇವರೇ, ನನಗೆ ಸಹಾಯಮಾಡಲು ಬೇಗನೆ ಬನ್ನಿರಿ.
2ನನ್ನ ಪ್ರಾಣ ತೆಗೆಯಲು ಯತ್ನಿಸುವವರೆಲ್ಲರು ನಾಚಿಕೆಪಟ್ಟು ಗಲಿಬಿಲಿಯಾಗಲಿ. ನನ್ನ ಕೇಡಿನಲ್ಲಿ ಸಂತೋಷಪಡುವವರೆಲ್ಲರೂ ಹಿಂಜರಿದು ಅವಮಾನ ಹೊಂದಲಿ.
3“ಆಹಾ! ಆಹಾ!” ಎಂದು ನನ್ನನ್ನು ಹಾಸ್ಯಮಾಡುವವರು ತಮ್ಮ ನಾಚಿಕೆಯ ಫಲಕ್ಕಾಗಿ ಬೆಂಗೊಟ್ಟು ಓಡಲಿ.
4ಆದರೆ, ನಿಮ್ಮನ್ನು ಹುಡುಕುವವರೆಲ್ಲರೂ ನಿಮ್ಮಲ್ಲಿ ಹರ್ಷಾನಂದಗೊಳ್ಳಲಿ. ನಿಮ್ಮ ರಕ್ಷಣೆಯನ್ನು ಪ್ರೀತಿಸುವವರು, “ದೇವರು ಮಹೋನ್ನತರು,” ಎಂದು ಯಾವಾಗಲೂ ಹೇಳಲಿ.
5ಆದರೆ ನಾನು ಬಡವನೂ ಅಗತ್ಯದಲ್ಲಿರುವವನೂ ಆಗಿದ್ದೇನೆ. ದೇವರೇ, ಬೇಗನೆ ನನ್ನ ಬಳಿಗೆ ಬನ್ನಿರಿ. ನನ್ನ ಸಹಾಯವೂ ನನ್ನನ್ನು ಬಿಡಿಸುವವರೂ ನೀವೇ, ಯೆಹೋವ ದೇವರೇ, ತಡಮಾಡದೆ ಬನ್ನಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.