Trumpets, harps, lyres, drums, flutes, cymbals, dancers, families, and animals celebrate at sunrise

ಕೀರ್ತನೆಗಳು 150

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 150 ಕೇಂದ್ರೀಕೃತ, ಅನಿರ್ಬಂಧಿತ ಸ್ತುತಿಯೊಂದಿಗೆ ಕೀರ್ತನೆಗಳ ಗ್ರಂಥವನ್ನು ಪೂರ್ಣಗೊಳಿಸುತ್ತದೆ. ಪವಿತ್ರಸ್ಥಳವೂ ಆಕಾಶವೂ, ಮಹತ್ಕಾರ್ಯಗಳೂ ಮೀರಿದ ಮಹತ್ವವೂ, ತುತ್ತೂರಿಯೂ ತಂತಿವಾದ್ಯಗಳೂ, ತಾಳವೂ ಝಲ್ಲರಿಗಳೂ, ನೃತ್ಯವೂ ಉಸಿರಾಡುವ ಪ್ರತಿಯೊಂದು ಜೀವಿಯೂ ಒಂದೇ ಕೊನೆಯ ಗಾಯಕವೃಂದವಾಗುತ್ತವೆ.
ಸ್ತುತಿಸಂಗೀತಪವಿತ್ರಸ್ಥಳಸೃಷ್ಟಿ
1ಯೆಹೋವ ದೇವರಿಗೆ ಸ್ತೋತ್ರ! ದೇವರನ್ನು ಅವರ ಪರಿಶುದ್ಧಾಲಯದಲ್ಲಿ ಸ್ತುತಿಸಿರಿ; ದೇವರ ಶಕ್ತಿದಾಯಕ ಆಕಾಶಮಂಡಲದಲ್ಲಿ ಅವರನ್ನು ಸ್ತುತಿಸಿರಿ.
2ದೇವರ ಮಹತ್ಕಾರ್ಯಗಳಿಗಾಗಿ ಅವರನ್ನು ಸ್ತುತಿಸಿರಿ; ದೇವರ ಮಹಾಪ್ರಭಾವಗಳಿಗಾಗಿ ಅವರನ್ನು ಸ್ತುತಿಸಿರಿ.
3ತುತೂರಿಯ ಶಬ್ದದಿಂದ ದೇವರನ್ನು ಸ್ತುತಿಸಿರಿ, ಕಿನ್ನರಿಯಿಂದಲೂ, ವೀಣೆಯಿಂದಲೂ, ಅವರನ್ನು ಸ್ತುತಿಸಿರಿ.
4ದಮ್ಮಡಿಯಿಂದಲೂ, ನಾಟ್ಯದಿಂದಲೂ ದೇವರನ್ನು ಸ್ತುತಿಸಿರಿ; ತಂತಿವಾದ್ಯಗಳಿಂದಲೂ, ಕೊಳಲುಗಳಿಂದಲೂ ಅವರನ್ನು ಸ್ತುತಿಸಿರಿ.
5ತಾಳಗಳಿಂದ ದೇವರನ್ನು ಸ್ತುತಿಸಿರಿ; ಪ್ರತಿಧ್ವನಿಸುವ ಝಲ್ಲರಿಗಳಿಂದಲೂ ಅವರನ್ನು ಸ್ತುತಿಸಿರಿ.
6ಶ್ವಾಸವುಳ್ಳದ್ದೆಲ್ಲಾ ಯೆಹೋವ ದೇವರನ್ನು ಸ್ತುತಿಸಲಿ. ಯೆಹೋವ ದೇವರಿಗೆ ಸ್ತೋತ್ರ!

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.