Pilgrims reconcile, reject bribery, and welcome neighbors below a sanctuary tent

ಕೀರ್ತನೆಗಳು 15

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 15 ಪವಿತ್ರತೆಯ ಸಮೀಪ ಯಾರು ವಾಸಿಸಬಹುದು ಎಂಬುದಕ್ಕೆ ಸಮಗ್ರ ಚಾರಿತ್ರ್ಯದ ಚಿತ್ರಣದ ಮೂಲಕ ಉತ್ತರಿಸುತ್ತದೆ. ಸತ್ಯವಾದ ಮಾತು, ನೆರೆಯವರ ಆರೈಕೆ, ಹಣಕಾಸಿನ ಪ್ರಾಮಾಣಿಕತೆ ಮತ್ತು ಸ್ಥಿರ ವಾಗ್ದಾನಗಳು ಸಾಮಾನ್ಯ ಸಂಬಂಧಗಳಲ್ಲಿಯೂ ಸಾರ್ವಜನಿಕ ನಡತೆಯಲ್ಲಿಯೂ ಆರಾಧನೆಯನ್ನು ಕಾಣುವಂತೆ ಮಾಡುತ್ತವೆ.
ಯಥಾರ್ಥತೆಆರಾಧನೆಸತ್ಯನೆರೆಯವರ ಪ್ರೀತಿ
1ಯೆಹೋವ ದೇವರೇ, ನಿಮ್ಮ ಪರಿಶುದ್ಧ ಗುಡಾರದಲ್ಲಿ ವಾಸಿಸುವವರು ಯಾರು? ನಿಮ್ಮ ಪರಿಶುದ್ಧ ಪರ್ವತದಲ್ಲಿ ಬಾಳುವವರು ಯಾರು?
2ದೋಷವಿಲ್ಲದವರಾಗಿ ಜೀವಿಸಿ, ನೀತಿಯನ್ನು ನಡೆಸಿ, ತಮ್ಮ ಹೃದಯದಿಂದ ಸತ್ಯವನ್ನಾಡುವವರೇ;
3ಅವರ ನಾಲಿಗೆಯು ಚಾಡಿ ಹೇಳುವುದಿಲ್ಲ, ತಮ್ಮ ನೆರೆಯವರಿಗೆ ಕೇಡುಮಾಡುವುದಿಲ್ಲ, ಇತರರನ್ನು ನಿಂದಿಸುವುದೂ ಇಲ್ಲ;
4ಅವರು ದುಷ್ಟರ ಸಹವಾಸ ಇಲ್ಲದವರೂ ಯೆಹೋವ ದೇವರಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವರೂ ನಷ್ಟವಾದರೂ ಕೊಟ್ಟ ಮಾತನ್ನು ತಪ್ಪದೇ, ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳದವರೂ ಆಗಿರಬೇಕು.
5ಅವರು ಬಡವರಿಗೆ ಸಾಲ ಕೊಟ್ಟು ಬಡ್ಡಿಕೇಳದವರೂ; ನಿರಪರಾಧಿಯ ಕೇಡಿಗಾಗಿ ಲಂಚ ತೆಗೆದುಕೊಳ್ಳದವರೂ ಆಗಿರಬೇಕು. ಈ ರೀತಿಯಾಗಿ ಬಾಳುವವರು ಎಂದಿಗೂ ಕದಲುವುದಿಲ್ಲ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.