People and animals across mountains and sea raise joyful attention beneath sun, moon, stars, and storms

ಕೀರ್ತನೆಗಳು 148

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 148 ಪ್ರತಿಯೊಂದು ಎತ್ತರವನ್ನೂ ಆಳವನ್ನೂ ಒಂದೇ ಗಾಯಕವೃಂದಕ್ಕೆ ಕರೆಯುತ್ತದೆ: ಆಕಾಶದ ಜ್ಯೋತಿಗಳು, ಹವಾಮಾನ, ಭೂದೃಶ್ಯಗಳು, ಪ್ರಾಣಿಗಳು, ಆಡಳಿತಗಾರರು, ಹಿರಿಯರು ಮತ್ತು ಮಕ್ಕಳು. ಸೃಷ್ಟಿಯ ವೈವಿಧ್ಯವು ಸ್ತುತಿ ಮತ್ತು ನವೀಕೃತ ಸಮುದಾಯದ ಘನತೆಯ ಒಂದೇ ಉದ್ದೇಶವನ್ನು ಹಂಚಿಕೊಳ್ಳುತ್ತದೆ.
ಸೃಷ್ಟಿಸ್ತುತಿಜನಾಂಗಗಳುಘನತೆ
1ಯೆಹೋವ ದೇವರನ್ನು ಸ್ತುತಿಸಿರಿ. ಆಕಾಶ ಮಂಡಲದಿಂದ ಯೆಹೋವ ದೇವರಿಗೆ ಸ್ತುತಿ ಸಲ್ಲಲಿ! ಮಹೋನ್ನತದ ದೇವರನ್ನು ಸ್ತುತಿಸಿರಿ.
2ದೇವರ ದೂತರುಗಳೇ, ದೇವರನ್ನು ಸ್ತುತಿಸಿರಿ; ದೇವರ ಪರಲೋಕದ ಎಲ್ಲಾ ಸೈನ್ಯಗಳೇ, ದೇವರನ್ನು ಸ್ತುತಿಸಿರಿ.
3ಸೂರ್ಯ, ಚಂದ್ರರೇ, ದೇವರನ್ನು ಸ್ತುತಿಸಿರಿ; ಬೆಳಕುಳ್ಳ ಎಲ್ಲಾ ನಕ್ಷತ್ರಗಳೇ, ದೇವರನ್ನು ಸ್ತುತಿಸಿರಿ.
4ಉನ್ನತ ಆಕಾಶಗಳೇ, ಆಕಾಶಗಳ ಮೇಲೆ ಇರುವ ಜಲಸಮೂಹವೇ, ದೇವರನ್ನು ಸ್ತುತಿಸಿರಿ.
5ಯೆಹೋವ ದೇವರ ಹೆಸರನ್ನು ಅವು ಸ್ತುತಿಸಲಿ, ಏಕೆಂದರೆ ದೇವರು ಆಜ್ಞಾಪಿಸಲು, ಅವು ನಿರ್ಮಿಸಲಾದವು.
6ಅವುಗಳನ್ನು ಯುಗ ಯುಗಗಳಿಗೂ ಸ್ಥಾಪಿಸಿದ್ದಾರೆ; ದೇವರು ತೀರ್ಪನ್ನು ಕೊಟ್ಟಿದ್ದಾರೆ, ಅದು ಮೀರಿ ಹೋಗುವುದಿಲ್ಲ.
7ಭೂಮಿಯಿಂದ ಯೆಹೋವ ದೇವರನ್ನು ಸ್ತುತಿಸಿರಿ; ಎಲ್ಲಾ ಅಗಾಧಗಳೇ,
8ಮಿಂಚೇ, ಕಲ್ಮಳೆಯೇ, ಹಿಮವೇ, ಹಬೆಯೇ, ದೇವರ ಮಾತನ್ನು ಕೇಳುವ ಬಿರುಗಾಳಿಯೇ,
9ಬೆಟ್ಟಗಳೇ, ಎಲ್ಲಾ ಗುಡ್ಡಗಳೇ, ಹಣ್ಣಿನ ಮರಗಳೇ, ಎಲ್ಲಾ ದೇವದಾರುಗಳೇ,
10ಕಾಡುಮೃಗಗಳೇ, ಎಲ್ಲಾ ಪಶುಗಳೇ, ಹರಿದಾಡುವ ಜೀವಜಂತುಗಳೇ, ಹಾರುವ ಪಕ್ಷಿಗಳೇ,
11ಭೂರಾಜರೇ, ಎಲ್ಲಾ ಪ್ರಜೆಗಳೇ, ಪ್ರಧಾನರೇ, ಭೂಮಿಯ ಎಲ್ಲಾ ನ್ಯಾಯಾಧಿಪತಿಗಳೇ,
12ಪ್ರಾಯಸ್ಥರೇ, ಕನ್ಯೆಯರೇ, ಮಕ್ಕಳೇ, ವೃದ್ಧರೇ.
13ಯೆಹೋವ ದೇವರ ಹೆಸರನ್ನು ಸ್ತುತಿಸಿರಿ; ಅವರ ಹೆಸರು ಮಾತ್ರ ಶ್ರೇಷ್ಠವಾಗಿದೆ; ಅವರ ಮಹಿಮೆಯು ಭೂಮ್ಯಾಕಾಶಗಳನ್ನು ಆವರಿಸಿದೆ.
14ದೇವರು ತಮ್ಮ ಜನರ ಬಲವನ್ನು ಮೇಲಕ್ಕೆತ್ತಿದ್ದಾರೆ. ದೇವರ ಇಸ್ರಾಯೇಲರೆಲ್ಲರೂ, ಭಕ್ತರೆಲ್ಲರೂ, ದೇವರಿಗೆ ಸಮೀಪವಾದ ಜನರೂ ದೇವರನ್ನು ಕೊಂಡಾಡಿರಿ. ಯೆಹೋವ ದೇವರನ್ನು ಸ್ತುತಿಸಿರಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.