Jerusalem rests among encircling mountains as families flourish inside and shadowed rulers approach outside

ಕೀರ್ತನೆಗಳು 125

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 125 ಭರವಸೆಯಿಡುವ ಜನರನ್ನು ಅಲುಗಾಡದ ಚೀಯೋನ್ ಬೆಟ್ಟಕ್ಕೂ ಸುತ್ತಲಿನ ರಕ್ಷಣೆಯನ್ನು ಯೆರೂಸಲೇಮಿನ ಪರ್ವತಗಳಿಗೂ ಹೋಲಿಸುತ್ತದೆ. ದಬ್ಬಾಳಿಕೆಯ ಆಳ್ವಿಕೆ ಶಾಶ್ವತವಾಗಿ ಉಳಿಯುವುದಿಲ್ಲ; ಯಥಾರ್ಥತೆ ಪ್ರೋತ್ಸಾಹಿಸಲ್ಪಡುತ್ತದೆ, ವಕ್ರ ಮಾರ್ಗಗಳು ತಿರಸ್ಕರಿಸಲ್ಪಡುತ್ತವೆ, ಮತ್ತು ಶಾಂತಿಯು ಪ್ರಾರ್ಥನೆಯನ್ನು ಮುಕ್ತಾಯಗೊಳಿಸುತ್ತದೆ.
ಚೀಯೋನ್ಸ್ಥಿರತೆರಕ್ಷಣೆಶಾಂತಿ
1ಯೆಹೋವ ದೇವರಲ್ಲಿ ಭರವಸವಿಡುವವರು ಚೀಯೋನ್ ಪರ್ವತದ ಹಾಗಿದ್ದಾರೆ; ಆ ಪರ್ವತವು ಯುಗಯುಗಕ್ಕೂ ಕದಲದೆ ಇರುವುದು.
2ಯೆರೂಸಲೇಮಿನ ಸುತ್ತಲೂ ಬೆಟ್ಟಗಳಿರುವಂತೆ, ಯೆಹೋವ ದೇವರು ಈಗಿನಿಂದ ಯುಗಯುಗಕ್ಕೂ ತಮ್ಮ ಜನರ ಸುತ್ತಲೂ ಇದ್ದಾರೆ.
3ನೀತಿವಂತರು ತಮ್ಮ ಕೈಗಳನ್ನು ಅನ್ಯಾಯಕ್ಕೆ ಚಾಚದ ಹಾಗೆ, ದುಷ್ಟನ ಕೋಲು ನೀತಿವಂತರ ಸ್ವಾಸ್ತ್ಯದ ಮೇಲೆ ನೆಲೆಯಾಗಿರುವುದಿಲ್ಲ.
4ಯೆಹೋವ ದೇವರೇ, ಒಳ್ಳೆಯವರಿಗೂ, ಯಥಾರ್ಥ ಹೃದಯವುಳ್ಳವರಿಗೂ ಒಳ್ಳೆಯದನ್ನು ಮಾಡುತ್ತಾರೆ.
5ಆದರೆ ಡೊಂಕು ಮಾರ್ಗಗಳಲ್ಲಿ ತಿರುಗುವವರನ್ನು, ದುಷ್ಟರ ಸಂಗಡ ದೇವರು ತೊಲಗಿಸಲಿ. ಇಸ್ರಾಯೇಲರ ಮೇಲೆ ಸಮಾಧಾನವಿರಲಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.