
ಕೀರ್ತನೆಗಳು 120
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 120 ಸುಳ್ಳು ತುಟಿಗಳು ಮತ್ತು ವಿನಾಶಕಾರಿ ಮಾತಿನ ಬಗ್ಗೆ ಸಂಕಟದೊಂದಿಗೆ ಯಾತ್ರೆಯ ಹಾಡುಗಳನ್ನು ಆರಂಭಿಸುತ್ತದೆ. ಶಾಂತಿಯಿಂದ ದೂರ ವಾಸಿಸುತ್ತಾ, ಶಾಂತಿಯ ಉದ್ದೇಶಗಳಿಗೆ ಯುದ್ಧದಿಂದ ಉತ್ತರಿಸುವ ನೆರೆಯವರ ನಡುವೆ ಮಾತನಾಡುವವನು ಸತ್ಯಕ್ಕೂ ಸಮನ್ವಯಕ್ಕೂ ಹಂಬಲಿಸುತ್ತಾನೆ.
ಸತ್ಯಶಾಂತಿಸಂಕಟಯಾತ್ರೆ
1ನನ್ನ ಇಕ್ಕಟ್ಟಿನಲ್ಲಿ ನಾನು ಯೆಹೋವ ದೇವರಿಗೆ ಕೂಗಿದೆನು; ಅವರು ನನಗೆ ಉತ್ತರಕೊಟ್ಟರು.
2ಯೆಹೋವ ದೇವರೇ, ನನ್ನ ಪ್ರಾಣವನ್ನು ಸುಳ್ಳು ತುಟಿಯಿಂದಲೂ, ಮೋಸದ ನಾಲಿಗೆಯಿಂದಲೂ ಬಿಡಿಸಿರಿ.
3ಮೋಸದ ನಾಲಿಗೆಯೇ, ದೇವರು ನಿನಗೆ ಏನು ಕೊಡಬೇಕು? ಯಾವ ಹೆಚ್ಚಿನ ಶಿಕ್ಷೆಯನ್ನು ಒದಗಿಸಬೇಕು?
4ಪರಾಕ್ರಮಶಾಲಿಯ ಹದವಾದ ಬಾಣಗಳು ಮತ್ತು ಜಾಲಿ ಮರದ ಕೆಂಡಗಳಿಂದ ನಿನಗೆ ಶಿಕ್ಷೆಯಾಗುವುದು.
5ಅಯ್ಯೋ, ನಾನು ಮೆಷೆಕಿನಲ್ಲಿ ತಂಗಬೇಕಲ್ಲಾ! ಕೇದಾರಿನ ಗುಡಾರಗಳ ಬಳಿ ವಾಸಮಾಡುತ್ತೇನೆ.
6ನಾನು ಸಮಾಧಾನವನ್ನು ವಿರೋಧಿಸುವವರ ಮಧ್ಯದಲ್ಲಿ ಬಹುಕಾಲ ಜೀವಿಸಬೇಕಾಯಿತು.
7ನಾನು ಶಾಂತಿ ಪ್ರಿಯನು; ಆದರೆ ನಾನು ಮಾತಾಡಿದರೆ ಅವರು ಯುದ್ಧಕ್ಕೆ ಬರುತ್ತಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.