Two great choirs with musicians processing along Jerusalem's wall toward the temple

ನೆಹೆಮೀಯ 12

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಯೆರೂಸಲೇಮಿನ ಗೋಡೆಯ ಪ್ರತಿಷ್ಠೆಗೆ ಮುಂಚೆ ಯಾಜಕ ಮತ್ತು ಲೇವಿಯ ವಂಶಗಳನ್ನು ನೆನಪಿಸಿಕೊಳ್ಳಲಾಗುತ್ತದೆ. ಎರಡು ಕೃತಜ್ಞತಾ ಗಾಯಕವೃಂದಗಳು ವಿರುದ್ಧ ದಿಕ್ಕುಗಳಲ್ಲಿ ಮೆರವಣಿಗೆ ಹೋಗುತ್ತವೆ, ಸಂಗೀತಗಾರರು ಆರಾಧನೆಯನ್ನು ಮುನ್ನಡೆಸುತ್ತಾರೆ, ಯಜ್ಞಗಳು ಮಹಾ ಆನಂದವನ್ನು ತರುತ್ತವೆ, ಮತ್ತು ನಿರಂತರ ದೇವಾಲಯದ ಬೆಂಬಲವನ್ನು ಸಂಘಟಿಸಲಾಗುತ್ತದೆ.
ಪ್ರತಿಷ್ಠೆಕೃತಜ್ಞತೆಸಂಗೀತಆನಂದ
1ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನ ಮತ್ತು ಯೇಷೂವನ ಸಂಗಡ ಹೋದ ಯಾಜಕರೂ ಲೇವಿಯರೂ ಯಾರೆಂದರೆ: ಸೆರಾಯ, ಯೆರೆಮೀಯ, ಎಜ್ರ,
2ಅಮರ್ಯ, ಮಲ್ಲೂಕ್, ಹಟ್ಟೂಷ್,
3ಶೆಕನ್ಯ, ರೆಹೂಮ್, ಮೆರೇಮೋತ್,
4ಇದ್ದೋ, ಗಿನ್ನೆತೋನ್ , ಅಬೀಯ,
5ಮಿಯಾಮಿನ್, ಮಾದ್ಯ, ಬಿಲ್ಗ,
6ಶೆಮಾಯ, ಯೋಯಾರೀಬ್, ಯೆದಾಯ,
7ಸಲ್ಲೂ, ಆಮೋಕ್, ಹಿಲ್ಕೀಯ, ಯೆದಾಯ. ಇವರು ಯೇಷೂವನ ದಿವಸಗಳಲ್ಲಿ ಯಾಜಕರಲ್ಲಿಯೂ, ಅವರ ಸಂಗಡಿಗರಲ್ಲಿಯೂ ಮುಖ್ಯಸ್ಥರಾಗಿದ್ದರು.
8ಲೇವಿಯರು ಯಾರೆಂದರೆ: ಯೇಷೂವ, ಬಿನ್ನೂಯ್, ಕದ್ಮಿಯೇಲ್, ಶೇರೇಬ್ಯ, ಯೆಹೂದ, ಕೃತಜ್ಞತೆಯ ಹಾಡುಗಳ ಜವಾಬ್ದಾರನಾಗಿದ್ದ ಮತ್ತನ್ಯನೂ, ಅವನ ಸಂಗಡಿಗರು.
9ಇದಲ್ಲದೆ ಅವರ ಸಹೋದರರಾದ ಬಕ್ಬುಕ್ಯ, ಉನ್ನೀ ವರ್ಗಗಳಲ್ಲಿ ಅವರಿಗೆ ಎದುರುಗಡೆ ನಿಂತು ಹಾಡುತ್ತಿದ್ದರು.
10ಇದಲ್ಲದೆ ಯೇಷೂವನು ಯೋಯಾಕೀಮನ ತಂದೆ, ಯೋಯಾಕೀಮನು ಎಲ್ಯಷೀಬನನ್ನು ಪಡೆದನು; ಎಲ್ಯಾಷೀಬನು ಯೋಯಾದನನ್ನು ಪಡೆದನು;
11ಯೋಯಾದಾವನು ಯೋನಾತಾನನನ್ನು ಪಡೆದನು; ಯೋನಾತಾನನು ಯದ್ದೂವನನ್ನು ಪಡೆದನು.
12ಯೋಯಾಕೀಮನ ಕಾಲದಲ್ಲಿ ಅವನ ಪಿತೃಗಳಲ್ಲಿ ಮುಖ್ಯಸ್ಥರಾಗಿದ್ದ ಯಾಜಕರು ಯಾರೆಂದರೆ: ಸೆರಾಯನ ವಂಶದವನಾದ ಮೆರಾಯನು, ಯೆರೆಮೀಯನ ವಂಶದವನಾದ ಹನನ್ಯಯನು,
13ಎಜ್ರನ ವಂಶದವನಾದ ಮೆಷುಲ್ಲಾಮನು, ಅಮರ್ಯನ ವಂಶದವನಾದ ಯೆಹೋಹಾನಾನನು,
14ಮಲ್ಲೂಕಿಯ ವಂಶದವನಾದ ಯೋನಾತಾನನು, ಶೆಬನ್ಯನ ವಂಶದವನಾದ ಯೋಸೇಫನು,
15ಹಾರಿಮನ ವಂಶದವನಾದ ಅದ್ನನು, ಮೆರಾಯೋತನ ವಂಶದವನಾದ ಹೆಲ್ಕಾಯನು,
16ಇದ್ದೋವಿನ ವಂಶದವನಾದ ಜೆಕರ್ಯನು, ಗಿನ್ನೆತೋನನ ವಂಶದವನಾದ ಮೆಷುಲ್ಲಾಮನು,
17ಅಬೀಯನ ವಂಶದವನಾದ ಜಿಕ್ರಿಯು, ಮಿನ್ಯಾಮೀನನ, ಮೋವಾದ್ಯನ ವಂಶದವನಾದ ಪಿಲ್ಟೈ,
18ಬಿಲ್ಗನ ವಂಶದವನಾದ ಶಮ್ಮೂವನು, ಶೆಮಾಯನ ವಂಶದವನಾದ ಯೆಹೋನಾತಾನನು,
19ಯೋಯಾರೀಬನ ವಂಶದವನಾದ ಮತ್ತೆನೈ, ಯೆದಾಯನ ವಂಶದವನಾದ ಉಜ್ಜೀ,
20ಸಲ್ಲೂ ವಂಶದವನಾದ ಕಲ್ಲಾಯನು, ಆಮೋಕನ ವಂಶದವನಾದ ಏಬೆರನು,
21ಹಿಲ್ಕೀಯನ ವಂಶದವನಾದ ಹಷಬ್ಯನು, ಯೆದಾಯನ ವಂಶದವನಾದ ನೆತನೆಯೇಲನು.
22ಎಲ್ಯಾಷೀಬ್, ಯೋಯಾದ, ಯೋಹಾನಾನ್, ಯದ್ದೂವ, ಇವರ ದಿವಸಗಳಲ್ಲಿ ಲೇವಿಯರೂ, ಯಾಜಕರೂ, ಪಾರಸಿಯನಾದ ದಾರ್ಯಾವೆಷನ ಆಳಿಕೆಯವರೆಗೆ ಪಿತೃಗಳ ಮುಖ್ಯಸ್ಥರಾಗಿ ಬರೆಯಲಾಗಿದೆ.
23ಎಲ್ಯಾಷೀಬನ ಮಗನಾದ ಯೋಹಾನಾನನ ಕಾಲದವರೆಗೆ ಲೇವಿ ಎಂಬವನ ಪುತ್ರರಾದ ಪಿತೃಗಳ ಮುಖ್ಯಸ್ಥರು ಇತಿಹಾಸ ಗ್ರಂಥದಲ್ಲಿ ಬರೆದಿರುತ್ತದೆ.
24ಲೇವಿಯರ ಮುಖ್ಯಸ್ಥರಾದ ಹಷಬ್ಯನೂ, ಶೇರೇಬ್ಯನೂ; ಕದ್ಮಿಯೇಲನ ಮಗನಾದ ಯೇಷೂವನೂ, ಅವರಿಗೆ ಎದುರಾದ ತಂಡವಾಗಿ ನಿಂತ ಅವರ ಸಹೋದರರೂ, ದೇವರ ಮನುಷ್ಯನಾದ ದಾವೀದನ ಆಜ್ಞೆಯ ಪ್ರಕಾರ ಕೃತಜ್ಞತಾಸ್ತುತಿ ಮಾಡುವುದಕ್ಕೆ ವರ್ಗ ವರ್ಗಗಳಾಗಿದ್ದರು.
25ಮತ್ತನ್ಯನೂ, ಬಕ್ಬುಕ್ಯನೂ, ಓಬದ್ಯನೂ, ಮೆಷುಲ್ಲಾಮನೂ, ಟಲ್ಮೋನನೂ, ಅಕ್ಕೂಬನೂ ಬೊಕ್ಕಸಗಳ ಬಾಗಿಲುಗಳನ್ನು ಕಾಯುವವರಾಗಿದ್ದರು.
26ಯೋಚಾದಾಕನ ಮಗ ಯೇಷೂವನ ಮಗ ಯೋಯಾಕೀಮನ ದಿವಸಗಳಲ್ಲಿಯೂ; ರಾಜ್ಯಪಾಲನಾದ ನೆಹೆಮೀಯನ ದಿವಸಗಳಲ್ಲಿಯೂ; ನಿಯಮಶಾಸ್ತ್ರಿಯೂ, ಯಾಜಕನೂ ಆದ ಎಜ್ರನ ದಿವಸಗಳಲ್ಲಿಯೂ ಇವರು ಇದ್ದರು.
27ಯೆರೂಸಲೇಮಿನ ಗೋಡೆಯನ್ನು ಪ್ರತಿಷ್ಠೆ ಮಾಡುವಾಗ ಸ್ತುತಿಗಳಿಂದಲೂ, ಹಾಡುವುದರಿಂದಲೂ, ತಾಳಗಳಿಂದಲೂ, ವೀಣೆಗಳಿಂದಲೂ, ಕಿನ್ನರಿಗಳಿಂದಲೂ ಪ್ರತಿಷ್ಠೆಯನ್ನು ಸಂತೋಷವಾಗಿ ಆಚರಿಸುವುದಕ್ಕೆ ಲೇವಿಯರನ್ನು ಯೆರೂಸಲೇಮಿಗೆ ಬರಮಾಡುವ ನಿಮಿತ್ತವಾಗಿ ಅವರನ್ನು ಅವರ ಸಮಸ್ತ ಸ್ಥಳಗಳಲ್ಲಿ ಹುಡುಕಿದರು.
28ಹಾಡುಗಾರರ ಮಕ್ಕಳು ಯೆರೂಸಲೇಮಿನ ಸುತ್ತಲಿರುವ ಬಯಲಿನಿಂದಲೂ, ನೆಟೋಫಾತ್ಯರ ಗ್ರಾಮಗಳಿಂದಲೂ,
29ಬೇತ್ ಗಿಲ್ಗಾಲ್ ಊರಿಂದಲೂ, ಗೆಬದ ಅಜ್ಮಾವೆತಿನ ಹೊಲಗಳಿಂದಲೂ ಕೂಡಿಕೊಂಡರು. ಹಾಡುಗಾರರು ತಮಗೋಸ್ಕರ ಯೆರೂಸಲೇಮಿನ ಸುತ್ತಲೂ ಗ್ರಾಮಗಳನ್ನು ಕಟ್ಟಿಸಿಕೊಂಡಿದ್ದರು.
30ಯಾಜಕರೂ, ಲೇವಿಯರೂ ತಮ್ಮನ್ನು ಶುದ್ಧ ಮಾಡಿಕೊಂಡು ಜನರನ್ನೂ, ಬಾಗಿಲುಗಳನ್ನೂ, ಗೋಡೆಯನ್ನೂ ಶುದ್ಧ ಮಾಡಿದರು.
31ಆಗ ನಾನು ಯೆಹೂದದ ಪ್ರಧಾನರನ್ನು ಗೋಡೆಯ ಮೇಲೆ ಬರಮಾಡಿ, ಸ್ತುತಿಸಲು ಎರಡು ಗುಂಪುಗಳನ್ನು ನೇಮಿಸಿದೆನು. ಒಂದು ಗುಂಪಿನವರು ಗೋಡೆಯ ಮೇಲೆ ಬಲಗಡೆಯಿಂದ ತಿಪ್ಪೆ ಬಾಗಿಲ ಕಡೆಗೆ ಹೋದರು.
32ಅವರ ಹಿಂಭಾಗದಲ್ಲಿ ಹೋಷಾಯನೂ, ಯೆಹೂದದ ಪ್ರಧಾನರಲ್ಲಿ ಅರ್ಧ ಜನರೂ,
33ಅಜರ್ಯನೂ, ಎಜ್ರನೂ, ಮೆಷುಲ್ಲಾಮನೂ,
34ಯೆಹೂದನೂ, ಬೆನ್ಯಾಮೀನನೂ, ಶೆಮಾಯನೂ, ಯೆರೆಮೀಯನೂ;
35ತುತೂರಿಗಳನ್ನು ಹಿಡಿಯುವ ಯಾಜಕರ ಮಕ್ಕಳಲ್ಲಿ ಆಸಾಫನ ಮಗ ಜಕ್ಕೂರನ ಮಗ, ಮೀಕಾಯನ ಮಗ, ಮತ್ತನ್ಯನ ಮಗ, ಶೆಮಾಯನ ಮಗ, ಯೋನಾತಾನನ ಮಗ ಜೆಕರ್ಯನೂ,
36ದೇವರ ಮನುಷ್ಯನಾದ ದಾವೀದನ ಗೀತವಾದ್ಯಗಳನ್ನು ಹಿಡಿಯುವ ಜೆಕರೀಯನ ಸಹೋದರರಾದ ಶೆಮಾಯ, ಅಜರಯೇಲ್, ಮಿಲಲೈ, ಗಿಲಲೈ, ಮಾಯೈ, ನೆತನೆಯೇಲ್, ಯೆಹೂದ, ಹನಾನೀ ಎಂಬವರು ನಡೆದರು; ನಿಯಮಶಾಸ್ತ್ರಿಯಾದ ಎಜ್ರನು ಇವರ ಮುಂದೆ ನಡೆದನು.
37ತಮಗೆ ಎದುರಾದ ಬುಗ್ಗೆಯ ಬಾಗಿಲಿಗೆ ಬಂದಾಗ ಗೋಡೆಯಲ್ಲಿ ಎತ್ತರವಾದ ದಾವೀದನ ಪಟ್ಟಣದ ಮೆಟ್ಟಿಲುಗಳಿಂದ ದಾವೀದನ ಅರಮನೆಯ ಮೇಲೆ ಪೂರ್ವದ ಕಡೆಗಿರುವ ನೀರಿನ ಬಾಗಿಲಿಗೆ ಹೋದರು.
38ಸ್ತುತಿಸುವ ಮತ್ತೊಂದು ಭಜನಾ ಮಂಡಳಿ ಅವರಿಗೆದುರಾಗಿ ನಡೆದರು. ನಾನು ಅವರ ಹಿಂದೆ ನಡೆದೆನು. ಗೋಡೆಯ ಮೇಲೆ ಇದ್ದ ಅರ್ಧ ಜನರು ಬುರುಜುಗಳ ಗೋಪುರದ ಆಚೆಯಿಂದ ನಡೆದು, ಅಗಲವಾದ ಗೋಡೆಯನ್ನು,
39ಎಫ್ರಾಯೀಮ್ ಬಾಗಿಲ ಮೇಲೆಯೂ, ಯೆಷಾನಾ ಬಾಗಿಲ ಮೇಲೆಯೂ, ಮೀನು ಬಾಗಿಲ ಮೇಲೆಯೂ ಹಾದು, ಹನನೇಲ್ ಗೋಪುರವನ್ನೂ, ಶತ ಗೋಪುರವನ್ನೂ ದಾಟಿ, ಕುರಿ ಬಾಗಿಲವರೆಗೆ ಬಂದು ಸೆರೆಮನೆಯ ಬಾಗಿಲ ಬಳಿಯಲ್ಲಿ ನಿಂತರು.
40ಸ್ತುತಿ ಮಾಡುವ ಎರಡು ಗುಂಪುಗಳೂ, ನಾನೂ, ನನ್ನ ಸಂಗಡ ಇದ್ದ ಅರ್ಧಮಂದಿ ಅಧಿಕಾರಿಗಳೂ ದೇವರ ಆಲಯದಲ್ಲಿ ನಿಂತಿದ್ದೆವು.
41ಆಗ ಯಾಜಕರಾದ ಎಲ್ಯಾಕೀಮನೂ, ಮಾಸೇಯನೂ, ಮಿನ್ಯಾಮೀನನೂ, ಮೀಕಾಯನೂ, ಎಲ್ಯೋವೇನೈನೂ, ಜೆಕರ್ಯನೂ, ಹನನ್ಯನೂ, ತುತೂರಿಗಳನ್ನು ಹಿಡಿದುಕೊಂಡವರೂ;
42ಮಾಸೇಯನೂ, ಶೆಮಾಯನೂ, ಎಲಿಯಾಜರನೂ, ಉಜ್ಜೀಯೂ, ಯೆಹೋಹಾನಾನನೂ, ಮಲ್ಕೀಯನೂ, ಏಲಾಮನೂ, ಏಜೆರನೂ, ತಮ್ಮ ಮೇಲ್ವಿಚಾರಕನಾದ ಯೆಜ್ರಾಹ್ಯನ ಸಂಗಡ ಹಾಡುಗಾರರು ಗಟ್ಟಿಯಾಗಿ ಹಾಡಿದರು.
43ಆ ದಿವಸದಲ್ಲಿ ಮಹಾಬಲಿಗಳನ್ನು ಅರ್ಪಿಸಿ, ದೇವರು ಅವರನ್ನು ಮಹಾ ಸಂತೋಷದಿಂದ ಸಂತೋಷಿಸಲು ಮಾಡಿದ್ದರಿಂದ ಅವರು ಸಂತೋಷಪಟ್ಟರು. ಇದಲ್ಲದೆ ಅವರು ತಮ್ಮ ಮಡದಿಮಕ್ಕಳೂಡನೆ ಮಹೋತ್ಸವ ಮಾಡಿದರು. ಆದ್ದರಿಂದ ಯೆರೂಸಲೇಮಿನ ಸಂತೋಷ ಧ್ವನಿಯು ಬಹು ದೂರಕ್ಕೆ ಕೇಳಿಸಿತು.
44ಅದೇ ಕಾಲದಲ್ಲಿ ಯಾಜಕರಿಗೋಸ್ಕರವೂ, ಲೇವಿಯರಿಗೋಸ್ಕರವೂ ಮೋಶೆಯ ನಿಯಮದಲ್ಲಿ ನೇಮಕವಾದ ಪ್ರಕಾರ, ಪಟ್ಟಣಗಳ ಹೊಲಗಳಿಂದ ಬರಬೇಕಾದ ಪಾಲುಗಳನ್ನು ಕೂಡಿಸುವ ಹಾಗೆ, ಬೊಕ್ಕಸಗಳನ್ನೂ, ಕಾಣಿಕೆಗಳನ್ನೂ, ಪ್ರಥಮ ಫಲಗಳನ್ನೂ, ಹತ್ತನೆಯ ಪಾಲುಗಳನ್ನೂ ಇರಿಸುವ ಉಗ್ರಾಣಗಳ ಮೇಲೆ ಪಾರುಪತ್ಯಗಾರರನ್ನು ನೇಮಿಸಿದರು. ಏಕೆಂದರೆ ಸೇವೆಮಾಡುತ್ತಿದ್ದ ಯಾಜಕರನ್ನೂ, ಲೇವಿಯರನ್ನೂ ಕುರಿತು ಯೆಹೂದದವರು ಬಹು ಸಂತೋಷಪಟ್ಟರು.
45ಇದಲ್ಲದೆ ದಾವೀದನೂ, ಅವನ ಮಗನಾದ ಸೊಲೊಮೋನನೂ ಕೊಟ್ಟ ಆಜ್ಞೆಯ ಪ್ರಕಾರ ಹಾಡುಗಾರರೂ, ದ್ವಾರಪಾಲಕರೂ ತಮ್ಮ ದೇವರ ಕಾವಲನ್ನೂ, ಶುದ್ಧೀಕರಣದ ಕಾವಲನ್ನೂ ಕಾಯುತ್ತಿದ್ದರು.
46ಏಕೆಂದರೆ ದಾವೀದನ ಮತ್ತು ಆಸಾಫನ ಕಾಲದಲ್ಲಿಯೇ ದೇವರಿಗೆ ಸ್ತೋತ್ರವನ್ನೂ, ಕೃತಜ್ಞತೆಯನ್ನೂ ಹಾಡತಕ್ಕ ಹಾಡುಗಾರರಲ್ಲಿ ಮುಖ್ಯಸ್ಥರಿದ್ದರು.
47ಆದ್ದರಿಂದ ಜೆರುಬ್ಬಾಬೆಲನ ದಿವಸಗಳಲ್ಲಿಯೂ, ನೆಹೆಮೀಯನ ದಿವಸಗಳಲ್ಲಿಯೂ ಇಸ್ರಾಯೇಲರೆಲ್ಲರು ಹಾಡುಗಾರರಿಗೂ, ದ್ವಾರಪಾಲಕರಿಗೂ, ನಿತ್ಯದ ಕಟ್ಟಳೆಯಾದ ಅವರವರ ಪಾಲನ್ನು ಕೊಟ್ಟರು. ಇದಲ್ಲದೆ ಅವರು ಇತರ ಲೇವಿಯರಿಗೆ ಭಾಗವನ್ನು ಪ್ರತ್ಯೇಕವಾಗಿಟ್ಟರು ಮತ್ತು ಲೇವಿಯರು ಆರೋನನ ವಂಶಸ್ಥರಿಗೆ ಭಾಗವನ್ನು ಪ್ರತ್ಯೇಕವಾಗಿಟ್ಟರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.