
2 ಪೂರ್ವಕಾಲ ವೃತ್ತಾಂತ 27
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಯೋತಾಮನು ತನ್ನ ತಂದೆಯ ದೇವಾಲಯದ ಅಪರಾಧವನ್ನು ಪುನರಾವರ್ತಿಸದೆ ನಂಬಿಗಸ್ತ ಮಾರ್ಗವನ್ನು ಅನುಸರಿಸುತ್ತಾನೆ. ಅವನು ದ್ವಾರಗಳು, ಗೋಡೆಗಳು, ಪಟ್ಟಣಗಳು, ಕೋಟೆಗಳು ಮತ್ತು ಗೋಪುರಗಳನ್ನು ಕಟ್ಟಿ, ಅಮ್ಮೋನನ್ನು ಸೋಲಿಸಿ, ತನ್ನ ಜೀವನವನ್ನು ಸ್ಥಿರವಾಗಿ ಕ್ರಮಗೊಳಿಸುವುದರಿಂದ ಶಕ್ತಿಶಾಲಿಯಾಗುತ್ತಾನೆ.
ನಂಬಿಗಸ್ತಿಕೆನಿರ್ಮಾಣಬಲನಾಯಕತ್ವ
1ಯೋತಾಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷ ಅವನ ತಾಯಿ.
2ಅವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು. ಆದರೆ ಅವನ ತಂದೆಯಂತೆ ಯೆಹೋವ ದೇವರ ಆಲಯದಲ್ಲಿ ಪ್ರವೇಶಿಸಲಿಲ್ಲ. ಆಗ ಜನರು ಇನ್ನೂ ಕೆಟ್ಟದ್ದನ್ನು ಮಾಡುತ್ತಾ ಇದ್ದರು.
3ಅವನು ಯೆಹೋವ ದೇವರ ಆಲಯದ ಮೇಲಿನ ಬಾಗಿಲನ್ನು ಕಟ್ಟಿಸಿ, ಓಫೇಲ್ ಗೋಡೆಯನ್ನು ಎತ್ತರವಾಗಿ ಕಟ್ಟಿಸಿದನು.
4ಇದಲ್ಲದೆ ಯೆಹೂದ ಪರ್ವತ ಪ್ರದೇಶದಲ್ಲಿ ಪಟ್ಟಣಗಳನ್ನೂ ಕಾಡುಗಳ ಪ್ರದೇಶದಲ್ಲಿ ಕೋಟೆಗಳನ್ನೂ ಬುರುಜುಗಳನ್ನೂ ಕಟ್ಟಿಸಿದನು.
5ಯೋತಾಮನು ಅಮ್ಮೋನ್ಯರ ಅರಸನ ಸಂಗಡ ಯುದ್ಧಮಾಡಿ ಅವನನ್ನು ಜಯಿಸಿದನು. ಆದ್ದರಿಂದ ಅಮ್ಮೋನಿಯರು ಅದೇ ವರ್ಷದಲ್ಲಿ 3,400 ಕಿಲೋಗ್ರಾಂ ಬೆಳ್ಳಿ, 1,600 ಮೆಟ್ರಿಕ್ ಟನ್ ಗೋಧಿ, 1,350 ಮೆಟ್ರಿಕ್ ಟನ್ ಜವೆಗೋಧಿಯನ್ನೂ ಅವನಿಗೆ ಕೊಟ್ಟರು. ಅಮ್ಮೋನಿಯರು ಎರಡನೆಯ ವರ್ಷದಲ್ಲಿಯೂ, ಮೂರನೆಯ ವರ್ಷದಲ್ಲಿಯೂ ಅದೇ ಪ್ರಕಾರ ಅವನಿಗೆ ಕೊಟ್ಟರು.
6ಹೀಗೆ ಯೋತಾಮನು ತನ್ನ ದೇವರಾದ ಯೆಹೋವ ದೇವರ ಮುಂದೆ ತನ್ನ ಮಾರ್ಗಗಳನ್ನು ಸರಿಪಡಿಸಿಕೊಂಡದ್ದರಿಂದ ಅವನು ಬಲಗೊಂಡನು.
7ಯೋತಾಮನ ಇತರ ಕ್ರಿಯೆಗಳೂ, ಅವನು ಮಾಡಿದ ಯುದ್ಧಗಳೂ, ಅವನ ಮಾರ್ಗಗಳೂ, ಅವು ಇಸ್ರಾಯೇಲರ ಮತ್ತು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
8ಅವನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು.
9ಯೋತಾಮನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಆಹಾಜನು ಅವನಿಗೆ ಬದಲಾಗಿ ಅರಸನಾದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.